ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಹೈಕೋರ್ಟ್ ನಕಾಕರಿಸಿದೆ. ವಾಲ್ಮೀಕಿ ನಿಗಮ ಹಗರಣದ ತನಿಖೆಯನ್ನು ಕೇಂದ್ರಕ್ಕೆ ವರ್ಗಾಯಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ವಾಲ್ಮೀಕಿ ಕೇಸ್ ತನಿಖೆಯನ್ನು SITಯಲ್ಲೇ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಸೆಕ್ಷನ್ 35 a ಸಿಬಿಐಗೆ ನೀಡಲು ಗ್ರೌಂಡ್ಸ್ ಅಲ್ಲ, ಒಂದು ವೇಳೆ ಅನುಮತಿಸಿದ್ರೆ ಎಲ್ಲ ಬ್ಯಾಂಕ್ಗಳು ಇದನ್ನೇ ಕೇಳ್ತಾವೆ ಹೀಗಾಗಿ ಅರ್ಜಿ ವಜಾ ಮಾಡಲಾಗಿದೆ ಎಂದ M.ನಾಗಪ್ರಸನ್ನ ಪೀಠ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ. ವಿ. ಆಚಾರ್ಯ, ಬ್ಯಾಂಕ್ ಸಲ್ಲಿಸಿರುವ ಅರ್ಜಿಯ ನಿರ್ವಹಣೆಯ ಬಗ್ಗೆ ಪ್ರಾಥಮಿಕ ಆಕ್ಷೇಪಣೆ ಎತ್ತಿದ್ದಾರೆ. ತನಿಖೆಯ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ತನಿಖೆ ಕಳಂಕಿತವೆಂದು ಯೂನಿಯನ್ ಬ್ಯಾಂಕ್ ಹೇಳಿಲ್ಲ. ಕೇವಲ ಬ್ಯಾಂಕ್ ನಿಯಂತ್ರಣ ಅಧಿನಿಯಮ ಸೆಕ್ಷನ್ 35ಎ ಉಲ್ಲೇಖಿಸಲಾಗಿದೆ. ತನಿಖೆಯ ವ್ಯಾಪ್ತಿ ಬಗ್ಗೆ ಸುಪ್ರೀಂಕೋರ್ಟ್ ಮಾತ್ರ ತೀರ್ಮಾನಿಸಬೇಕು. ಹೀಗಾಗಿ ಅರ್ಜಿ ವಿಚಾರಣೆಗೆ ಯೋಗ್ಯವಲ್ಲವೆಂದು ವಾದಿಸಿದರು.
ಇದನ್ನೂ ಓದಿ : ‘ದಳಪತಿ 69’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ? ಕಾಲಿವುಡ್ ಅಂಗಳದಿಂದ ಕೇಳಿ ಬರ್ತಿದೆ ಶಿವಣ್ಣನ ಹೆಸರು..!