ಬೆಂಗಳೂರು : ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ದದ್ದಲ್ ಮನೆ ಮೇಲೆ ಬೆಳ್ಳಂಬೆಳಗ್ಗೆ ED ರೇಡ್ ಮಾಡಿದೆ. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಸಂಬಧ ED ರೇಡ್ ನಡೆಸಿದ್ದು, ನಾಗೇಂದ್ರ, ದದ್ದಲ್ಗೆ ಸೇರಿದ 18 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ED ಅಧಿಕಾರಿಗಳು ಬೆಳ್ಳಂಬೆಳಗ್ಗೆ ರೇಡ್ ಮಾಡಿ ಪರಿಶೀಲನೆ ನಡೆಸುತ್ತಿದ್ದು, ಕೋಟಿ-ಕೋಟಿ ಅಕ್ರಮದ ದಾಖಲೆ ಪರಿಶೀಲನೆ ಮಾಡ್ತಿದೆ. ಮಾಜಿ ಸಚಿವ ನಾಗೇಂದ್ರಗೆ ಸೇರಿದ ಬಳ್ಳಾರಿ, ಬೆಂಗಳೂರಿನಲ್ಲಿರುವ ಮನೆ, ಆಪ್ತರ ಮನೆ, ಕಚೇರಿಗಳ ಮೇಲೆ ರೇಡ್ ಮಾಡಿ ಶೋಧ ನಡೆಸುತ್ತಿದೆ. ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮನೆ, ಆಪ್ತರ ಮನೆಯಲ್ಲೂ ಪರಿಶೀಲನೆ ನಡೆಸುತ್ತಿದ್ದು, ರಾಯಚೂರು, ಬೆಂಗಳೂರಿನಲ್ಲಿರುವ ಬಸನಗೌಡ ದದ್ದಲ್ ಮನೆಗಳಲ್ಲಿ ಇಡಿ ಶೋಧ ಕಾರ್ಯ ಮುಂದುವರೆಸಿದೆ.
ಒಟ್ಟು 18 ಕಡೆಗಳಲ್ಲಿ ED ಅಧಿಕಾರಿಗಳು ದಾಳಿ ಮಾಡಿದ್ದು, SIT ವಿಚಾರಣೆ ಹೊತ್ತಲ್ಲೇ ಮಾಜಿ ಮಂತ್ರಿ, ಹಾಲಿ MLAಗೆ ED ಶಾಕ್ ಕೊಟ್ಟು ಸಂಕಷ್ಟಕ್ಕೆ ತಳ್ಳಿದೆ. SITಯಿಂದ ತಪ್ಪಿಸಿಕೊಂಡ್ರೂ EDಯಿಂದ ಅರೆಸ್ಟ್ ಆಗ್ತಾರಾ ನಾಗೇಂದ್ರ ಎಂಬ ಚರ್ಚೆಗಳು ನಡೆಯುತ್ತಿದೆ.
ರಾಜ್ಯ ಸರ್ಕಾರ ನಾಗೇಂದ್ರ, ದದ್ದಲ್ ರಕ್ಷಿಸುತ್ತಿದೆ ಅನ್ನೋ ಆರೋಪ ಹೊತ್ತಲ್ಲೇ ED ರೇಡ್ ಮಾಡಿದೆ. ಬಿ.ನಾಗೇಂದ್ರ ನಿನ್ನೆ SIT ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಸತತ 8 ತಾಸಿನ ವಿಚಾರಣೆ ವೇಳೆ “ಮಾಜಿ ಸಚಿವ ನಾಗೇಂದ್ರ SIT ಮುಂದೆ ಸರಿಯಾದ ಮಾಹಿತಿ ನೀಡಿಲ್ಲ, ನಾಗೇಂದ್ರ ಹೇಳಿಕೆಗಳಿಂದ ಅಧಿಕಾರಿಗಳಿಗೆ ನಂಬಿಕೆ ಬಂದಿಲ್ಲ. ಹೀಗಾಗಿ ಇಂದು ಮತ್ತೆ ನಾಗೇಂದ್ರಗೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಸೂಚಿಸಿದೆ. ಅಂತೆಯೇ ಇಂದು ವಿಚಾರಣೆ ಮುಗಿದ ನಂತರ ನಾಗೇಂದ್ರ ಅವರನ್ನು ಅರೆಸ್ಟ್ ಮಾಡೋ ಸಾಧ್ಯತೆಯಿದೆ.
ಇದನ್ನೂ ಓದಿ : ಇಂದು ಸುಪ್ರೀಂ ಕೋರ್ಟ್‌ನಲ್ಲಿ ಭವಾನಿ ರೇವಣ್ಣ ಬೇಲ್ ಭವಿಷ್ಯ ನಿರ್ಧಾರ – ರದ್ದಾದ್ರೆ ಇಂದೇ ಅರೆಸ್ಟ್?