Download Our App

Follow us

Home » ಅಪರಾಧ » ಚಾಮರಾಜನಗರ : 8 ಸಾವಿರ ಲಂಚಕ್ಕೆ ಬೇಡಿಕೆ – ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ನಾಗರಾಜು ಲೋಕಾಯುಕ್ತ ಬಲೆಗೆ..!

ಚಾಮರಾಜನಗರ : 8 ಸಾವಿರ ಲಂಚಕ್ಕೆ ಬೇಡಿಕೆ – ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ನಾಗರಾಜು ಲೋಕಾಯುಕ್ತ ಬಲೆಗೆ..!

ಚಾಮರಾಜನಗರ : ಬೋರ್​​ವೆಲ್​​​ ಕೊರೆಸಲು ಅರ್ಜಿ ಹಾಕುವ ವಿಚಾರಕ್ಕೆ ಹಣ ಪಡೆಯುತ್ತಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ಚಾಮರಾಜನಗರದಲ್ಲಿ ಲೋಕಾ ಬಲೆಗೆ ಬಿದ್ದಿದ್ದಾರೆ. ತಾಲೂಕು ಅಧಿಕಾರಿ ನಾಗರಾಜು ಎಂಟು ಸಾವಿರ ಹಣ ಪಡೆಯುವಾಗ ಲೋಕಾ ಟ್ರ್ಯಾಪ್​ ಮಾಡಿದೆ.

ತಾಲ್ಲೂಕಿನ ಕಣ್ಣೇಗಾಲ ಗ್ರಾಮದ ಫಲಾನುಭವಿಯೊಬ್ಬರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅವರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಬೇಕಾಗಿತ್ತು. ಕೆಲಸ ಮಾಡಿಕೊಡಲು ನಾಗರಾಜು ಅವರು 8 ಸಾವಿರ ಲಂಚ ಕೇಳಿದ್ದರು. ಈ ಬಗ್ಗೆ ಫಲಾನುಭವಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಶನಿವಾರ ನಗರದಲ್ಲಿ ನಾಗರಾಜು, ದೂರುದಾರರಿಂದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅವರನ್ನು ಬಂಧಿಸಿ, 8 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಇನ್ಸ್ ಪೆಕ್ಟರ್ ಶಶಿಕುಮಾರ್, ಮುಖ್ಯ ಪೇದೆ ಮಹಾಲಿಂಗಸ್ವಾಮಿ, ಶ್ರೀನಿವಾಸ್, ಮನೋರಂಜನ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

ಇದನ್ನೂ ಓದಿ : ಬೆಚ್ಚಿ ಬೀಳಿಸಿದ ಸರಣಿ ಕಳ್ಳತನ : ಮುಸುಕುಧಾರಿಗಳ ಕೃತ್ಯ CCTVಯಲ್ಲಿ ಸೆರೆ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here