Download Our App

Follow us

Home » ರಾಜಕೀಯ » ವಾಲ್ಮೀಕಿ ನಿಗಮದ ಬಹುಕೋಟಿ ವರ್ಗಾವಣೆ ಕೇಸ್ : ಮಾಜಿ ಸಚಿವ ನಾಗೇಂದ್ರ ಹಾಗೂ ಆಪ್ತರಿಗೆ SIT ನೋಟಿಸ್..!

ವಾಲ್ಮೀಕಿ ನಿಗಮದ ಬಹುಕೋಟಿ ವರ್ಗಾವಣೆ ಕೇಸ್ : ಮಾಜಿ ಸಚಿವ ನಾಗೇಂದ್ರ ಹಾಗೂ ಆಪ್ತರಿಗೆ SIT ನೋಟಿಸ್..!

ಬೆಂಗಳೂರು : ವಾಲ್ಮೀಕಿ ನಿಗಮದ ಬಹುಕೋಟಿ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಸಚಿವ ನಾಗೇಂದ್ರ, ನಿಗಮದ ಅಧ್ಯಕ್ಷ ದದ್ದಲ್​ಗೆ ಶಾಕ್​​​ ಎದುರಾಗಿದೆ. ಈಗಾಗಲೇ ನಾಗೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಮಾಜಿ ಮಂತ್ರಿ ಹಾಗೂ MLA ಆಪ್ತರಿಗೆ SIT ನೋಟಿಸ್​ ನೀಡಿದೆ.

ಮಾಜಿ ಸಚಿವ ನಾಗೇಂದ್ರ ಆಪ್ತ ಸಹಾಯಕ ದೇವೇಂದ್ರಪ್ಪಗೆ ನೋಟಿಸ್​ ನೀಡಿ, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ದೇವೆಂದ್ರಪ್ಪ 4.4ಕೋಟಿ ಹಣ ನೀಡಿರೋದು ಬೆಳಕಿಗೆ ಬಂದಿದೆ. ದೇವೇಂದ್ರಪ್ಪ ಆದಿಯಾಗಿ ಆರೋಪಿಗಳ್ಯಾರೂ ನಾಗೇಂದ್ರ ಹೆಸರು ಹೇಳ್ತಿಲ್ಲ. ಅಗತ್ಯ ಬಿದ್ದರೆ ದೇವೆಂದ್ರಪ್ಪರನ್ನು ಮತ್ತೆ ವಿಚಾರಣೆಗೆ ಕರೆಸೋ ಸಾಧ್ಯತೆಯಿದೆ. ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಪಿಎಸ್ ಹಂಪಣ್ಣಗೂ ನೋಟಿಸ್​ ಜಾರಿಯಾಗಿದೆ.

ಈ ಹಿನ್ನೆಲೆ ಇಂದು ಹಂಪಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದ್ದು, ಈಗಾಗಲೇ ಕಿಂಗ್ ಪಿನ್ ಸತ್ಯನಾರಾಯಣ ರಾವ್, ಸಾಯಿ ತೇಜ ಅರೆಸ್ಟ್ ಆಗಿದ್ದಾರೆ. ಸತ್ಯನಾರಾಯಣ ಕೋಟಿ ಕೋಟಿ ಹಣ ಅಕ್ರಮವಾಗಿ ಪಡೆದಿರೋದಾಗಿ ಹೇಳಿದ್ದ. ನಿಗಮದ ಎಂ.ಡಿ ಪದ್ಮನಾಭ ಮತ್ತು ಅಕೌಂಟೆಂಟ್ ಪರಶುರಾಮ್ ಕೂಡಾ ಅರೆಸ್ಟ್​ ಆಗಿದ್ದಾರೆ. ಇದೀಗ ಬಿ.ನಾಗೇಂದ್ರ, ಬಸನಗೌಡ ದದ್ದಲ್​​​​ಗೂ ನೋಟಿಸ್​ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಇದನ್ನೂ ಓದಿ : ಬಹುನಿರೀಕ್ಷಿತ ‘ಪೌಡರ್‌’ ಚಿತ್ರದ ಫಸ್ಟ್ ಸಾಂಗ್ ರಿಲೀಸ್..!

Leave a Comment

DG Ad

RELATED LATEST NEWS

Top Headlines

ದಶಕದ ಬಳಿಕ ಟೀಂ ಇಂಡಿಯಾ ವಿರುದ್ಧ ಸರಣಿ ಗೆದ್ದ ಆಸ್ಟ್ರೇಲಿಯಾ..!

ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಭಾರತದ ವಿರುದ್ಧದ 5ನೇ ಟೆಸ್ಟ್​ ಪಂದ್ಯದಲ್ಲಿಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಆಸೀಸ್ ಪಡೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 3-1

Live Cricket

Add Your Heading Text Here