ಬೆಂಗಳೂರು : ವಾಲ್ಮೀಕಿ ಹಗರಣ ಕೇಸ್ನಲ್ಲಿ ಈಗಾಗಲೇ ಮಾಜಿ ಮಂತ್ರಿ ಬಿ.ನಾಗೇಂದ್ರ ಪರಪ್ಪನ ಅಗ್ರಹಾರ ಸೇರಿದ್ದಾರೆ. ನಾಗೇಂದ್ರಗೆ ಆಗಸ್ಟ್ 3ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಸ್ಟೋಟಕ ಮಾಹಿತಿಯೊಂದು ಹೊರಬಿದ್ದಿದೆ.
ಈ ಪಕ್ರರಣದಲ್ಲಿ ಮಾಜಿ ಸಚಿವ ನಾಗೇಂದ್ರ ಹೆಸರೇಳುವಂತೆ ED ಅಧಿಕಾರಿಗಳು ಒತ್ತಡ, ಮಾನಸಿಕವಾಗಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ವಾಲ್ಮೀಕಿ ನಿಗಮದ ಮಾಜಿ ಎಂಡಿ ಕಲ್ಲೇರ್ಶ್ ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ED ವಿರುದ್ಧ ದೂರು ನೀಡಿದ್ದಾರೆ. ದೂರಿನ ಮೇರೆಗೆ ED ಅಧಿಕಾರಿಗಳಾದ ಮಿತ್ತಲ್, ಮುರುಳಿ ಕಣ್ಣನ್ ವಿರುದ್ಧ FIR ದಾಖಲಾಗಿದೆ.
FIRನಲ್ಲಿ ಎ1 ಆಗಿರೋ ಮಿತ್ತಲ್, ಎ2 ಆಗಿರೋ ಮುರುಳಿ ಕಣ್ಣನ್, ಹಣ ವರ್ಗಾವಣೆಗೆ ನಾಗೇಂದ್ರ ಸೂಚನೆ ಇತ್ತು ಅಂತಾ ಒಪ್ಪಿಕೊಂಡ್ರೆ ಬಿಡುತ್ತೇವೆ ಅಂತಾ ಬೆದರಿಸಿದ್ದರಂತೆ. ಅಷ್ಟೇ ಅಲ್ಲದೇ ರೆಸ್ಟ್ ಮಾಡುತ್ತೇವೆ ಅಂತಾ ಕಿರುಕುಳ ಅಧಿಕಾರಿಗಳು ಕೊಟ್ಟಿದ್ದರಂತೆ.
ಇನ್ನು ನೀನೊಬ್ಬ ಅಪರಾಧಿ, ನಿನ್ನನ್ನ ಈಗಲೇ ಅರೆಸ್ಟ್ ಮಾಡ್ತೇನೆ ಇಡಿ ಬಗ್ಗೆ ನಿಂಗೆ ಗೊತ್ತಿಲ್ಲ. 2-3 ವರ್ಷ ನಿಂಗೆ ಬೇಲ್ ಸಿಗಲ್ಲ. ಇಡಿ ಸಹಾಯ ಮಾಡ್ಬೇಕು ಅಂದ್ರೆ ಒಪ್ಪಿಕೋ. ಎಂಜಿ ರೋಡ್ ಖಾತೆಗೆ ನಾಗೇಂದ್ರ ಹೇಳಿದಂಗೆ ಟ್ರಾನ್ಸ್ಫರ್ ಮಾಡಿದೆ ಅಂತಾ ಒಪ್ಪಿಕೋ. ಅವರ ಒತ್ತಡ ಇತ್ತು ಅಂತಾ ಬರೆದುಕೊಡು ಅಂತಾ ಅಧಿಕಾರಿಗಳು ಬೆದರಿಸಿದ್ದರಂತೆ. ಒಪ್ಪಿಕೊಳ್ಳದಿದ್ರೆ ಅರೆಸ್ಟ್ ಗ್ಯಾರಂಟಿ ಅಂತಾ ಬೆದರಿಸಿದ್ದರು ಅಂತಾ ಕಲ್ಲೇಶ್ ಆರೋಪ ಮಾಡಿದ್ದಾರೆ. ಇದೀಗ ಕಲ್ಲೇಶ್ ಹೇಳಿಕೆ ಮೇಲೆ ED ಅಧಿಕಾರಿಗಳ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ದರ್ಶನ್ಗೆ ಮತ್ತೆ ಜೈಲ್ ಊಟವೇ ಗತಿ – ಜುಲೈ 25ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್..!