Download Our App

Follow us

Home » ರಾಜಕೀಯ » ಊಟಕ್ಕೂ ಬಿಡದೇ ತಡರಾತ್ರಿವರೆಗೂ ಕಲಾಪ – ವಿಧಾನಸಭೆಯಲ್ಲಿ ದಾಖಲೆ ನಿರ್ಮಿಸಿದ ಯು.ಟಿ.ಖಾದರ್​​​..!

ಊಟಕ್ಕೂ ಬಿಡದೇ ತಡರಾತ್ರಿವರೆಗೂ ಕಲಾಪ – ವಿಧಾನಸಭೆಯಲ್ಲಿ ದಾಖಲೆ ನಿರ್ಮಿಸಿದ ಯು.ಟಿ.ಖಾದರ್​​​..!

ಬೆಳಗಾವಿ : ಕಲಾಪ ನಡೆಸುವ ವಿಚಾರದಲ್ಲಿ ವಿಧಾನಸಭೆಯ ಸ್ಪೀಕರ್‌ ಯು.ಟಿ.ಖಾದರ್, ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅಂದರೆ ಸೋಮವಾರ 14 ಗಂಟೆಗಳ ಕಾಲ ಕಲಾಪ ನಡೆಸಿದ್ದ ಖಾದ‌ರ್ ಅವರು ಬುಧವಾರ 15 ಗಂಟೆಗಳಷ್ಟು ಸುದೀರ್ಘ ಕಲಾಪ ನಡೆಸಿದ್ದಾರೆ. ಸೋಮವಾರ ಮಧ್ಯ ರಾತ್ರಿ 12.50 ರವರೆಗೆ ಕಲಾಪ ನಡೆದಿದ್ದರೆ, ಬುಧವಾರ ಮಧ್ಯ ರಾತ್ರಿ 12.45ರವರೆಗೆ ಕಲಾಪ ನಡೆಸಿದರು. ಇಂದು(ಗುರುವಾರ) ಅಧಿವೇಶನದ ಕೊನೆಯ ದಿನ. ಹೀಗಾಗಿ ಕಾರ್ಯಕಲಾಪ ಪೂರ್ಣಗೊಳಿಸಲು ಈ ರೀತಿ ಸುದೀರ್ಘ ಕಲಾಪ ನಡೆಸಲಾಯಿತು.

ಊಟಕ್ಕೂ ವಿರಾಮ ಇಲ್ಲ : ಸಾಮಾನ್ಯವಾಗಿ ಕಲಾಪಕ್ಕೆ ಮಧ್ಯಾಹ್ನದ ಭೋಜನ ವಿರಾಮ ನೀಡಲಾಗುತ್ತದೆ. ಆದರೆ, ಬುಧವಾರ ಭೋಜನ ವಿರಾಮವನ್ನೂ ನೀಡದೆ, ಯಾವುದೇ ಗದ್ದಲಕ್ಕೂ ಮುಂದೂಡದೆ ಬೆಳಗ್ಗೆ 9.45ರಿಂದ ಸತತ 15 ಗಂಟೆ ಕಾಲ ಕಲಾಪ ನಡೆಸಿದ್ದು ಅಧಿವೇಶನದ ಇತಿಹಾಸದಲ್ಲಿ ಇದೇ ಮೊದಲು. ಕಲಾಪ ಮುಗಿಯುವ ಹೊತ್ತಿನಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ ಸೇರಿ ಕೆಲವೇ ಸಚಿವರು, ಶಾಸಕರು ಹಾಜರಿದ್ದರು.

ಇನ್ನು ಈ ಹೊತ್ತಿನಲ್ಲಿ ಸದಸ್ಯರ ಪ್ರಶ್ನೆಗಳಿಗೆ ಸಚಿವರು ತಾಳ್ಮೆಯಿಂದಲೇ ವಿವರವಾಗಿ ಉತ್ತರ ನೀಡಿದ್ದು ವಿಶೇಷವಾಗಿತ್ತು. ಸಂಪ್ರದಾಯದಂತೆ ಕಲಾಪ ಆರಂಭದ ಸಮಯದಲ್ಲೇ ಪ್ರಶೋತ್ತರ ಕಲಾಪ ನಡೆಯುತ್ತದೆ. ಆದರೆ, ಸ್ಪೀಕರ್ ಖಾದ‌ರ್ ಅವರು ಇತರ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಕೊನೆಯಲ್ಲಿ ಪ್ರಶೋತ್ತರ ಮತ್ತು ಗಮನ ಸೆಳೆಯುವ ಸೂಚನೆ ತೆಗೆದುಕೊಂಡಿದ್ದಾರೆ. ಯಾವ ಗದ್ದಲದ ಸಂದರ್ಭದಲ್ಲೂ ಕಲಾಪ ಮುಂದೂಡದೇ ಅಧಿವೇಶನದ ಇತಿಹಾಸದಲ್ಲಿ 15 ಗಂಟೆ ಸತತ ಕಲಾಪ ನಡೆಸುವ ಮೂಲಕ ತಮ್ಮದೇ ಹೆಸರಿನ ದಾಖಲೆಯನ್ನು ಸ್ಪೀಕರ್​ ಖಾದರ್​​​ ಮುರಿದಿದ್ದಾರೆ.

ಮಂಗಳೂರಿನವರಿಗಾಗಿಯೇ ಸದನ : ಪುತ್ತೂರು ಶಾಸಕ ಅಶೋಕ್ ಕುಮಾರ್‌ ರೈ ಅವರು ಮಂಗಳೂರು ಭಾಗದಲ್ಲಿ ನಡೆಸುವ ಕಂಬಳಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರದ ಗಮನ ಸೆಳೆದರು. ಅದಕ್ಕೆ ಸ್ಪೀಕ‌ರ್, ಸರ್ಕಾರಕ್ಕೆ ಅನುದಾನ ಕೇಳುತ್ತಿದ್ದೇವೆ. ಅವರು ಕೊಡದಿದ್ದರೂ ಕಂಬಳ ನಡೆಸುವಷ್ಟು ಶಕ್ತರಾಗಿದ್ದೀರಿ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಬೈರೇಗೌಡ, ಕಳೆದ ಒಂದೂವರೆ ವರ್ಷದಿಂದ ಮಂಗಳೂರಿನವರಿಗಾಗಿಯೇ ಸದನ ನಡೆಸಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ ಎಂದರು. ಅದರಲ್ಲಿ ತಪ್ಪೇನೂ ಇಲ್ಲ ಎಂದ ಸ್ಪೀಕರ್‌, ಶಾಸಕರ ಕಾಲೆಳೆದರು.

ಇದನ್ನೂ ಓದಿ : ಮುಂಬೈ : ಪ್ರಯಾಣಿಕರಿದ್ದ ಹಡಗಿಗೆ ನೌಕಾಪಡೆಯ ಸ್ಪೀಡ್‌ಬೋಟ್‌ ಡಿಕ್ಕಿ.. 13 ಮಂದಿ ಸಾವು.. ಹಲವರು ನಾಪತ್ತೆ!

Leave a Comment

DG Ad

RELATED LATEST NEWS

Top Headlines

ಮತ್ತೊಂದು ಸ್ಟಾರ್ ಜೋಡಿಯ ಡಿವೋರ್ಸ್ ಪಕ್ಕಾನಾ – ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ ದಂಪತಿ!

ಮುಂಬೈ: ಟಿಂ ಇಂಡಿಯಾದ ಆಲ್​​ರೌಂಡರ್​ ಹಾರ್ದಿಕ್ ಪಾಂಡ್ಯಾ ಡಿವೋರ್ಸ್​ ಬೆನ್ನಲ್ಲೇ ಇದೀಗ ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಆಟಗಾರನ ವಿಚ್ಛೇದನ ಸುದ್ದಿ ವ್ಯಾಪಕ ಚರ್ಚೆಯಾಗುತ್ತಿದೆ.  ಭಾರತದ ತಂಡದ

Live Cricket

Add Your Heading Text Here