ವಿಜಯಪುರ : ಕಳೆದ ಕೆಲ ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಅನೇಕ ರೈತರ ಜಮೀನುಗಳಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿತ್ತು. ಇದರಿಂದ ಕೆರಳಿದ ರೈತರು ಹಲವು ದಿನಗಳಿಂದ ನಮ್ಮ ಭೂಮಿ ವಾಪಸ್ ಕೊಡಿಸಿ ಎಂದು ವಿಜಯಪುರ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.
ಈ ಬೆನ್ನಲ್ಲೇ ಇದೀಗ ವಕ್ಫ್ ಭೂ ಬಿರುಗಾಳಿ ಎದ್ದಿರೋ ವಿಜಯಪುರಕ್ಕೆ ಇಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಲಿದ್ದಾರೆ. ವಕ್ಫ್ ನೋಟಿಸ್ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಭೇಟಿ ಮಾಡಿ ಪ್ರಲ್ಹಾದ್ ಜೋಶಿ ಅವರು ಚರ್ಚೆ ನಡೆಸಲಿದ್ದಾರೆ.
ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿರುವ ರೈತರ ಜೊತೆ ಇಂದು ಬೆಳಗ್ಗೆ 11.30ಕ್ಕೆ ಜೋಶಿ ಅವರು ಚರ್ಚೆ ನಡೆಸಲಿದ್ದಾರೆ. ಬಿಜೆಪಿ ಅಧ್ಯಯನ ಟೀಂ ನಿನ್ನೆಯಷ್ಟೇ ವಿಜಯಪುರಕ್ಕೆ ಭೇಟಿ ನೀಡಿತ್ತು. ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿತ್ತು. ಈ ಎಲ್ಲವುಗಳ ಬಗ್ಗೆ ಇದೀಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾಹಿತಿ ಸಂಗ್ರಹ ಮಾಡಿದ್ದು,
ಕೇಂದ್ರಕ್ಕೂ ಈ ಸಂಬಂಧ ಜೋಶಿ ಮಾಹಿತಿ ನೀಡಲು ಸಿದ್ದತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಬಿಗ್ಬಾಸ್ ಮನೆಯಲ್ಲಿ ಅಸಲಿ ಆಟ ಶುರು ಮಾಡಿದ ಹನುಮಂತ.. 2ನೇ ಬಾರಿ ಕ್ಯಾಪ್ಟನ್..!