ಉಡುಪಿ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಜೊತೆಗೆ ಉಡುಪಿ ಜಿಲ್ಲೆಯ ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶವಾದ ಹೆಬ್ರಿ ,ಕುಂದಾಪುರ ಭಾಗದಲ್ಲಿ ಸುಂಟರಗಾಳಿ ಬೀಸಿದೆ.
ಸುಂಟರಗಾಳಿ ಬೀಸಿದ ಪರಿಣಾಮ ಅಪಾರ ಪ್ರಮಾಣದ ಬೆಳೆ, ಮನೆ, ದನದ ಕೊಟ್ಟಿಗೆಗಳು, ನೂರಾರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಕುಳ್ಳುಂಜೆ, ಶಂಕರನಾರಾಯಣ ವ್ಯಾಪ್ತಿಯಲ್ಲಿ ಎರಡು ಮನೆ, ದನದ ಕೊಟ್ಟಿಗೆ ಮತ್ತು ಅಪಾರ ಕೃಷಿ ಪ್ರದೇಶಕ್ಕೆ ಹಾನಿಯಾಗಿದೆ.
ಗ್ರಾಮಿಣ ಭಾಗವಾದ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ರಟ್ಟಾಡಿ ಹಾಗೂ ಕೊಳಂಜೆ ಎಂಬಲ್ಲಿ ಕೃಷಿ ತೋಟಕ್ಕೆ ಅಪಾರ ಹಾನಿ ಸಂಭವಿಸಿದೆ. ಕೊಳಂಜೆಯಲ್ಲಿ ಸುಮಾರು ಮೂರೂವರೆ ಎಕರೆ ಕೃಷಿ ಭೂಮಿ ಸುಂಟರಗಾಳಿಯ ತೀವ್ರತೆಗೆ ಧ್ವಂಸವಾಗಿದೆ. ಹಲವಾರು ಮನೆಗಳಿಗೂ ಹಾನಿಯಾಗಿವೆ.
ರಟ್ಟಾಡಿಯಲ್ಲಿ ಮರಗಳೂ ಸೇರಿದಂತೆ ತೋಟಗಳಿಗೆ ನುಗ್ಗಿದ ಸುಂಟರಗಾಳಿಯಿಂದಾಗಿ 1,000ಕ್ಕೂ ಹೆಚ್ಚು ಅಡಿಕೆ ಮರ, 50ಕ್ಕೂ ಹೆಚ್ಚು ತೆಂಗಿನ ಮರ, ಅಪಾರ ಪ್ರಮಾಣದ ಬಾಳೆ ಗಿಡ ನಾಶವಾಗಿದೆ. ಅಲ್ಲದೇ ಮನಗಳ ಮೇಲ್ಛಾವಣಿಗಳೂ ಧರೆಗುರುಳಿವೆ. ಇನ್ನು ಘಟನಾ ಸ್ಥಳಕ್ಕೆ ಕೃಷಿ ಅಧಿಕಾರಿಗಳು ಭೇಟಿ ನೀಡಿದ್ದು, ಸಂಭವಿಸಿದ ನಷ್ಟಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಯುವ-ಶ್ರೀದೇವಿ ಡಿವೋರ್ಸ್ ಕೇಸ್ ವಿಚಾರಣೆ ಆ.23ಕ್ಕೆ ಮುಂದೂಡಿಕೆ..!