ಬೆಂಗಳೂರು : ಹೊಯ್ಸಳ ವಾಹನದಲ್ಲಿ ಕಲೆಕ್ಷನ್ ಮಾಡುತ್ತಿದ್ದ ಪೊಲೀಸರನ್ನು ಕಳ್ಳ ಕಳ್ಳ ಪೊಲೀಸ್ ಕಳ್ಳ ಎಂದು ಜನರು ಅಟ್ಟಿಸಿಕೊಂಡು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಘಟನೆ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ.
ರಾಜಗೋಪಾಲನಗರ ಠಾಣೆಯ ಸಿಬ್ಬಂದಿ ಎಎಸ್ಐ ರಾಮಲಿಂಗಯ್ಯ, ಹೆಡ್ ಕಾನ್ಸ್ಟೇಬಲ್ ಪ್ರಸನ್ನ ಕುಮಾರ್ ಎಂಬುವವರನ್ನು ಸಸ್ಪೆಂಡ್ ಮಾಡಲಾಗಿದೆ.
ರಾಮಲಿಂಗಯ್ಯ ಮತ್ತು ಪ್ರಸನ್ನ ಕುಮಾರ್ ಅವರು ಹೊಯ್ಸಳ ವಾಹನದಲ್ಲಿ ಬಂದು ಜನರ ಬಳಿ ಹಣ ಕಲೆಕ್ಷನ್ ಮಾಡುತ್ತಿದ್ದರು. ಇದನ್ನು ಕೆಲವರು ನೋಡಿ ಕಳ್ಳ..ಕಳ್ಳ.. ಪೊಲೀಸ್ ಕಳ್ಳ ಎಂದು ಜನರೇ ಚೇಸ್ ಮಾಡಿ ವಿಡಿಯೋ ಮಾಡ್ಕೊಂಡು ವೈರಲ್ ಮಾಡಿದ್ದರು. ವಿಡಿಯೋ ಮಾಡಿದ ಬಳಿಕ ಬೆಂಗಳೂರು ಪೊಲೀಸ್ ಅಕೌಂಟ್ಗೆ ಪೋಸ್ಟ್ ಮಾಡಿದ್ದರು. ಇನ್ನು ವಿಡಿಯೋ ಗಮನಕ್ಕೆ ಬರ್ತಿದ್ದಂತೆ ಕ್ರಮಕ್ಕೆ ಸೂಚಿಸಿದ್ದ ಕಮಿಷನರ್ ವಿಡಿಯೋ ಆಧರಿಸಿ ಸದ್ಯ ಈಗ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ : ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ ಡಿಸಿಎಂ ಡಿಕೆಶಿ..!