ವಿಜಯನಗರ : ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಐದು ದಿನಗಳಾಗಿದ್ದು, ಕ್ಷಣ ಕ್ಷಣವೂ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಹೊಸ ಸ್ಟಾಪ್ಲ್ಯಾಗ್ ಗೇಟ್ ಅಳವಡಿಸಲು ತಜ್ಞರು ಹರಸಾಹಸ ಪಡುತ್ತಿದ್ದಾರೆ. ನಿನ್ನೆ ಕಾರ್ಯಾಚರಣೆ ನಡೆಸಿ ಎರಡು ಕ್ರೇನ್ಗಳ ಮೂಲಕ ಸ್ಟಾಪ್ ಲಾಗ್ ಎತ್ತಿ ಅಳವಡಿಸಲು ಸಿಬ್ಬಂದಿ ಸರ್ವ ಪ್ರಯತ್ನ ಮಾಡಿದ್ದರು. ಆದರೆ, ಈ ವೇಳೆ ಸಾಕಷ್ಟು ತಾಂತ್ರಿಕ ತೊಡಕು ಎದುರಾಗಿದೆ.
ತಜ್ಞರ ತಂಡ ಇಂದು ಕೂಡ ಗೇಟ್ ಅಳವಡಿಕೆ ಕಾರ್ಯ ಮುಂದುವರಿಸಲಿದ್ದು, ಸಂಜೆ ವೇಳೆಗೆ ಗೇಟ್ ಕೂರಿಸುವ ಕಾರ್ಯ ಬಹುತೇಕ ಮುಕ್ತಾಯವಾಗುವ ಸಾಧ್ಯತೆ ಇದೆ. ಮುಳುಗು ತಜ್ಞರ ಸಹಾಯದಿಂದ ಗೇಟ್ ಅಳವಡಿಕೆಗೆ ಇಂದು ಪ್ರಯತ್ನ ಮಾಡಲಾಗುತ್ತದೆ. ಡ್ಯಾಮ್ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೀತಿದ್ದು, ನೂರಾರು ಸಿಬ್ಬಂದಿ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸುತ್ತಿದ್ದಾರೆ.
ಹೇಗಿದೆ ತಜ್ಞರ ಪ್ಲಾನ್? ಮೊದಲ ಗೇಟ್ ಕೂರಿಸೋದು ದೊಡ್ಡ ಚಾಲೇಂಜ್ ಆಗಿದ್ದು, ಅದನ್ನ ಹಾಕಿದ್ರೆ ನಂತರದಲ್ಲಿ ಅಷ್ಟೊಂದು ಕಷ್ಟ ಆಗುವುದಿಲ್ಲ. ಒಟ್ಟು ಐದು ಸ್ಟಾಪ್ ಲಾಗ್ ಗೇಟ್ಗಳನ್ನ ಅಳವಡಿಕೆ ಮಾಡಲು ಕಾರ್ಯಾಚರಣೆ ಪ್ರಾರಂಭ ಮಾಡಲಾಗಿದೆ. ಒಟ್ಟು 5 ಗೇಟ್ಗಳನ್ನ ಅಳವಡಿಕೆ ಮಾಡಲಾಗ್ತಿದ್ದು, ಒಂದು ಸ್ಟಾಪ್ ಲಾಗ್ ಗೇಟ್ 25 TMC ನೀರನ್ನ ತಡೆಯುತ್ತೆ. ಅವಶ್ಯಕತೆ ಬಿದ್ದರೆ ಇನ್ನು ಮೂರು ಗೇಟ್ಗಳನ್ನ ಅಳವಡಿಕೆ ಮಾಡಲು ತಜ್ಞರ ತಂಡ ಪ್ಲಾನ್ ಮಾಡಿಕೊಂಡಿದೆ. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದ ತಂಡ ಒಟ್ಟು 90 TMC ನೀರನ್ನ ಸಂಗ್ರಹ ಮಾಡುವ ಪ್ರಯತ್ನದಲ್ಲಿದೆ. ಇನ್ನು ಆಪರೇಷನ್ ಸಂದರ್ಭ ಮುನ್ನೆಚ್ಚರಿಕಾ ಕ್ರಮವಾಗಿ ಡ್ಯಾಂ ಮುಂಭಾಗದಲ್ಲಿ ಎಸ್ಡಿಆರ್ಎಫ್, ಅಗ್ನಿಶಾಮಕ ಸಿಬ್ಬಂದಿ ಸನ್ನದ್ಧವಾಗಿದ್ದಾರೆ.
ಇದನ್ನೂ ಓದಿ : ನಾಡಿನೆಲ್ಲೆಡೆ ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಸಡಗರ..!