Download Our App

Follow us

Home » ಜಿಲ್ಲೆ » ಪೀಣ್ಯ ಫ್ಲೈಓವರ್ ಮೇಲೆ 30 ಟನ್ ತೂಕದ ಟ್ರಕ್ ಗಳನ್ನ‌ ನಿಲ್ಲಿಸಿ ಲೋಡ್ ಟೆಸ್ಟಿಂಗ್..!

ಪೀಣ್ಯ ಫ್ಲೈಓವರ್ ಮೇಲೆ 30 ಟನ್ ತೂಕದ ಟ್ರಕ್ ಗಳನ್ನ‌ ನಿಲ್ಲಿಸಿ ಲೋಡ್ ಟೆಸ್ಟಿಂಗ್..!

ಬೆಂಗಳೂರು : ಪೀಣ್ಯ ಫ್ಲೈಓವರ್ ಮೇಲೆ ಲೋಡ್ ಟೆಸ್ಟಿಂಗ್ ಮಾಡುತ್ತಿದ್ದು, 30 ಟನ್ ತೂಕದ ಟ್ರಕ್ ಗಳನ್ನ‌ ನಿಲ್ಲಿಸಿ ಲೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ. 39 ಟನ್ ತೂಕದ 16 ಟ್ರಕ್ ಗಳಿಂದ ಲೋಡ್ ಟೆಸ್ಟಿಂಗ್ ನಡೆಸಿದ್ದಾರೆ.

ಎರಡು ಪಿಲ್ಲರ್ ಗಳ ಬಳಿ 8-8 ಟ್ರಕ್ ಗಳನ್ನ ನಿಲ್ಲಿಸಿ ಪರೀಕ್ಷೆ ಮಾಡಿದ್ದು, ನಿನ್ನೆ ಮೊದಲ ಹಂತದಲ್ಲಿ 30 ಟನ್ ತೂಕದ ಟ್ರಕ್ ಗಳನ್ನು ಫ್ಲೈ ಓವರ್ ಮೇಲೆ ಮೂಮೆಂಟ್ ಮಾಡಲಾಗಿತ್ತು.

ಎರಡೆರಡು ಟ್ರಕ್ ಗಳಂತೆ ಹಂತ ಹಂತವಾಗಿ ಮೂಮೆಂಟ್ ಮಾಡುತ್ತಿದ್ದು, ಈ ವೇಳೆ ಪಿಲ್ಲರ್ ನ ಸ್ಪ್ರಿಂಗ್ ಎಷ್ಟು ಕೆಳಗಡೆ ಹೋಗಿದೆ. ಅನ್ನೋದರ ಬಗ್ಗೆ ಪರೀಕ್ಷೆ ಮಾಡಲಾಗಿತ್ತು. ಈಗ ಎರಡು ಪಿಲ್ಲರ್ ಗಳ ಮೇಲೆ 8-8 ಟ್ರಕ್ ಗಳನ್ನ ನಿಲ್ಲಿಸಲಾಗಿದೆ.

ನಾಳೆ ಬೆಳಿಗ್ಗೆ ತನಕ ಈ ಟ್ರಕ್ ಗಳು ಇಲ್ಲೇ ಇರಲಿದ್ದು, 24 ಗಂಟೆಯ ನಂತರ ಮತ್ತೆ ಟ್ರಕ್ ನಿಲ್ಲಿಸಿದ್ದ ಪಿಲ್ಲರ್ ಗಳ ಸ್ಪ್ರಿಂಗ್ ಎಷ್ಟು ಡೌನ್ ಆಗಿದೆ ಅನ್ನೋದರ ಬಗ್ಗೆ ಪರೀಕ್ಷೆ ನಡೆಸಿದ್ದಾರೆ. ಈ ಮೂಲಕ ಪಿಲ್ಲರ್ ಗಳ ಗುಣ್ಣ ಮಟ್ಟ ಹೇಗಿದೆ, ಘನ ವಾಹನದ ಸಂಚಾರಕ್ಕೆ ಯೋಗ್ಯವಾಗಿದೆಯಾ ಅನ್ನೋದರ ಟೆಸ್ಟಿಂಗ್ ನಡೆಯಲಿದೆ.

ಇದನ್ನೂ ಓದಿ : ಆಧಾರ್ ಕಾರ್ಡ್ ಮತ್ತು ಫಿಂಗರ್ ಪ್ರಿಂಟ್ ಬಳಸಿ ಬ್ಯಾಂಕ್​ನಲ್ಲಿದ್ದ ಹಣ ವಂಚನೆ ಕೇಸ್ : ಆರೋಪಿಗಳು ಅರೆಸ್ಟ್..!

 

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here