Download Our App

Follow us

Home » ಜಿಲ್ಲೆ » ಟ್ರಕ್​ಗೆ ಹಿಂಬದಿಯಿಂದ ಗುದ್ದಿದ ಮತ್ತೊಂದು ಟ್ರಕ್ – ಏಕಾಏಕಿ ಹೊತ್ತಿಕೊಂಡ ಬೆಂಕಿ.. ಓರ್ವ ಚಾಲಕ ಸಜೀವ ದಹನ..!

ಟ್ರಕ್​ಗೆ ಹಿಂಬದಿಯಿಂದ ಗುದ್ದಿದ ಮತ್ತೊಂದು ಟ್ರಕ್ – ಏಕಾಏಕಿ ಹೊತ್ತಿಕೊಂಡ ಬೆಂಕಿ.. ಓರ್ವ ಚಾಲಕ ಸಜೀವ ದಹನ..!

ಬಾಗಲಕೋಟೆ  : ಅಪಘಾತದ ವೇಳೆ ಎರಡು ಟ್ರಕ್​ಗಳು ಹೊತ್ತಿ ಉರಿದ ಘಟನೆ ಬೆಳಗಲ್ ಕ್ರಾಸ್ ಬಳಿಯ NH50ರಲ್ಲಿ ತಡರಾತ್ರಿ ನಡೆದಿದೆ. ಪರಿಣಾಮ ಓರ್ವ ಟ್ರಕ್​ ಚಾಲಕ ಸಾವನ್ನಪ್ಪಿದ್ದಾನೆ.

ಬೆಳಗಲ್ ಕ್ರಾಸ್ ಬಳಿ ಒಂದು ಟ್ರಕ್​​ಗೆ ಇನ್ನೊಂದು ಟ್ರಕ್ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಎರಡೂ ಟ್ರಕ್​ಗಳು ಹುನಗುಂದ ನಿಂದ ಆಲಮಟ್ಟಿ ಮಾರ್ಗದ ಕಡೆಗೆ ಹೊರಟಿದ್ದವು. ರೋಡ್ ಬ್ರೇಕರ್ ಬಂದಾಗ ಮುಂದೆ ಹೊರಟಿದ್ದ ಖಾಲಿ ಟ್ರಕ್ ನಿಧಾನವಾಗಿ ಚಲಿಸಿದೆ. ಈ ವೇಳೆ ಹಿಂದೆ ಬರ್ತಿದ್ದ ಹತ್ತಿ ಬೀಜದ ಲೋಡ್ ಹಾಕಿದ್ದ ಟ್ರಕ್ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ಪರಿಣಾಮ ಟ್ರಕ್​ನ ಟೈಯರ್ ಬ್ಲಾಸ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಹಿಂದಿನ ಟ್ರಕ್​ನಲ್ಲಿ ಹತ್ತಿ ಬೀಜದ ಲೋಡ್ ಹಾಕಿದ್ದ ಕಾರಣ ಕ್ಷಣ ಮಾತ್ರದಲ್ಲೇ ಬೆಂಕಿ ಜೋರಾಗಿ ಉರಿದು ಎರಡೂ ಟ್ರಕ್​ಗೆ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಓರ್ವ ಲಾರಿ ಚಾಲಕ ಸಾವನ್ನಪ್ಪಿದ್ದಾನೆ.

ಒಂದು ಲಾರಿ ರಾಜಸ್ಥಾನ ಮೂಲದ್ದಾಗಿದ್ದು, ಇನ್ನೊಂದು ಲಾರಿ ಮಹಾರಾಷ್ಟ್ರ ಮೂಲದೆಂಬ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವನ್ನಪ್ಪಿದ ಮೃತ ಚಾಲಕನ ಹೆಸರು ಇನ್ನಷ್ಟೇ ಪತ್ತೆಯಾಗಬೇಕಿದೆ. ಸದ್ಯ ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದು, ತನಿಖೆಯಿಂದ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : ನಾಗೇಂದ್ರ ಬೆನ್ನಲ್ಲೇ ದದ್ದಲ್​​ಗೂ ಅರೆಸ್ಟ್ ಸಂಕಷ್ಟ – ಸೆಷನ್​​ ನಡೆಯೋ ಹೊತ್ತಲ್ಲೇ ನೋಟಿಸ್​ ಕೊಟ್ಟ ED..!

 

 

Leave a Comment

DG Ad

RELATED LATEST NEWS

Top Headlines

ಬೆಂಗಳೂರಿನ M.S.ರಾಮಯ್ಯ ಆಸ್ಪತ್ರೆಯಲ್ಲಿ ಅಗ್ನಿ ಅವಘಡ..!

ಬೆಂಗಳೂರು : ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾಗಿರುವ M.S.ರಾಮಯ್ಯ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರೋಗಿಗಳು, ಆಸ್ಪತ್ರೆ ಸಿಬ್ಬಂದಿಗೆ ತೀವ್ರ

Live Cricket

Add Your Heading Text Here