ಚಿಕ್ಕಬಳ್ಳಾಪುರ : ವಿದ್ಯುತ್ ಅವಘಡದಲ್ಲಿ ಲೈನ್ಮ್ಯಾನ್ ದಾರುಣವಾಗಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲ್ಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ನಡೆದಿದೆ. ದಾವಣಗೆರೆಯ ಉದಯ್ ಕುಮಾರ್ ಸಾವನ್ನಪ್ಪಿದ ಲೈನ್ಮ್ಯಾನ್.
ಮೃತ ಲೈನ್ಮ್ಯಾನ್ ಉದಯ್ ಕುಮಾರ್ ಗೌರಿಬಿದನೂರು ತಾಲ್ಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ ರಿಪೇರಿಗೆ ಹೋಗಿದ್ದ ವೇಳೆ ಅವಘಡ ಸಂಭವಿಸಿದೆ. ಇನ್ನು ಈ ಘಟನೆಯಿಂದ ಲೈನ್ಮ್ಯಾನ್ ಮೃತದೇಹ ಕಂಬದಲ್ಲೇ ನೇತಾಡುತ್ತಿದ್ದು, ದುರ್ಘಟನೆ ಸಂಭವಿಸಿ 1 ಗಂಟೆಯಾದ್ರೂ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಘಟನ ಸ್ಥಳಕ್ಕೆ ಗೌರಿಬಿದನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ : ‘ಉತ್ತರಕಾಂಡ’ ಚಿತ್ರದಲ್ಲಿ ನಟಿ ಭಾವನಾ ಮೆನನ್ ಪಾತ್ರ ರಿವೀಲ್ : ವೀರವ್ವ ಆಗಿ ಕಾಣಿಸಿಕೊಂಡ ನಟಿ..!
Post Views: 314