Download Our App

Follow us

Home » ಸಿನಿಮಾ » ಬಹುನಿರೀಕ್ಷಿತ ‘ಹೈನ’ ಸಿನಿಮಾದ ಟ್ರೈಲರ್ ರಿಲೀಸ್​.. ಚಿತ್ರತಂಡಕ್ಕೆ ಶುಭ ಹಾರೈಸಿದ ಸಂಸದ ತೇಜಸ್ವಿ ಸೂರ್ಯ!

ಬಹುನಿರೀಕ್ಷಿತ ‘ಹೈನ’ ಸಿನಿಮಾದ ಟ್ರೈಲರ್ ರಿಲೀಸ್​.. ಚಿತ್ರತಂಡಕ್ಕೆ ಶುಭ ಹಾರೈಸಿದ ಸಂಸದ ತೇಜಸ್ವಿ ಸೂರ್ಯ!

ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ವಿಭಿನ್ನ ಕಥಾಹಂದರ ಹೊಂದಿರುವ “ಹೈನ” ಚಿತ್ರ ಪೆಟ್ರಿಯಾಟಿಕ್ ಕಥಾಹಂದರ ಹೊಂದಿರುವ ಚಿತ್ರ. ಇದೇ ತಿಂಗಳ 31 ರಂದು ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ “ಹೈನ” ಚಿತ್ರದ ಟ್ರೈಲರ್ ಅನಾವರಣ ‌ಮಾಡಿ ಶುಭ ಹಾರೈಸಿದ್ದಾರೆ‌.

ಸಮಾಜಕ್ಕೆ ಉತ್ತಮ ಸಂದೇಶ ನೀಡಲು “ಹೈನ” ಚಿತ್ರ ಮಾಡಿದ್ದಾರೆ‌. ಪ್ರಚಲಿತ ವಿಷಯ ಮುಂದಿಟ್ಟುಕೊಂಡು ಜನರಲ್ಲಿ‌ ಅರಿವು ಮೂಡಿಸುವ ಪ್ರಯತ್ನ ಕೂಡ ಈ ಚಿತ್ರದ‌ ಮೂಲಕ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದ ಸಮಾಜದಲ್ಲಿ ಜಾಗೃತಿ ಉಂಟಾಗಲಿ, ವೆಂಕಟ್ ಭಾರಧ್ವಜ್ ಅವರ ಪ್ರಯತ್ನಕ್ಕೆ ಒಳ್ಳೆಯದಾಗಲಿ, ಇನ್ನಷ್ಟು ಸಿನಿಮಾ ಅವರಿಂದ ಬರಲಿ ಎಂದು ಚಿತ್ರತಂಡಕ್ಕೆ ಸಂಸದ ತೇಜಸ್ವಿ ಸೂರ್ಯ ಹಾರೈಸಿಸಿದ್ದಾರೆ.

ಇದೊಂದು ರಾಷ್ಟ್ರಭಕ್ತಿಯ ಕಥಾಹಂದರ ಹೊಂದಿರುವ ಚಿತ್ರ ಎಂದು ಮಾತನಾಡಿದ ನಿರ್ದೇಶಕ ವೆಂಕಟ್ ಭಾರದ್ವಾಜ್, ಇಂತಹ ಚಿತ್ರ ನಿರ್ದೇಶನ ಮಾಡಲು ಬಹಳ ಖುಷಿಯಾಗಿದೆ. ಗುಪ್ತಾಚಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ರಕ್ಷಣಾ ಇಲಾಖೆಯ ಕಾರ್ಯವೈಖರಿಯ‌ ಬಗ್ಗೆ ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿಕೊಟ್ಟ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದ. ನಮ್ಮ ಚಿತ್ರದಲ್ಲಿ ಬೇರೆ ಕೆಲವು ದೇಶಗಳ ಹೆಸರನ್ನು ಬಳಸಿದ್ದೆವು. ಆ ಹೆಸರನ್ನು ಬಳಸದಂತೆ ಸೆನ್ಸಾರ್ ಮಂಡಳಿ ಹೇಳಿದೆ‌. ಅದು ಸ್ವಲ್ಪ ಬೇಸರವಾಗಿದೆ. ಉಳಿದಂತೆ ಚಿತ್ರತಂಡದ ಸಹಕಾರದಿಂದ “ಹೈನ” ಚಿತ್ರ ಚೆನ್ನಾಗಿ ಮೂಡಿಬಂದಿದೆ. ಜನವರಿ 31ರಂದು ಬಿಡುಗಡೆಯಾಗುತ್ತಿದೆ ಎಂದರು.

ಅಕ್ರಮ‌ ವಲಸಿಗರು ದೇಶಕ್ಕೆ ನುಸುಳಿ, ಹೇಗೆ ಉಪಯೋಗಿಸುತ್ತಿದ್ದಾರೆ . ದೇಶದ ಆಂತರಿಕ ಭದ್ರತೆ , ಭಯೋತ್ಪಾದಕರಿಗೆ ಹಣ ಹೇಗೆ ಬರುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಕಥೆ ಬರೆದಿರುವ ಲಕ್ಷ್ಮಣ್ ಶಿವಶಂಕರ್ ಹೇಳಿದರು.

ಸಿನಿಮಾದ ಛಾಯಾಗ್ರಾಹಕ ನಿಶಾಂತ್ ನಾಣಿ , ಸಂಕಲನಕಾರ ಶಮೀಕ್ ಕೆಲಸ ಮಾಡಿದ್ದು, ವೆಂಕಟ್ ಭಾರದ್ವಾಜ್ ಹಾಗೂ ರಾಜ್ ಕಮಲ್ ನಿರ್ಮಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಹರ್ಷ ಅರ್ಜುನ್, ದಿಗಂತ ಸ್ವರೂಪ, ರಾಜ್ ಕಮಲ್, ಲಕ್ಷ್ಮಣ ಶಿವಶಂಕರ್, ನಂದಕಿಶೋರ್ ಮತ್ತು ಲಾರೆನ್ಸ್ ಪ್ರೀತಂ ಅವರಂತಹ ಪ್ರತಿಭಾನ್ವಿತ ನಟರಿದ್ದಾರೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್​ನಲ್ಲಿ ಜ.24ಕ್ಕೆ ನಟ ದರ್ಶನ್ ಭವಿಷ್ಯ? – ಡಿ ಗ್ಯಾಂಗ್​ಗೆ ಸಿಗುತ್ತಾ ರಿಲೀಫ್​?

Leave a Comment

DG Ad

RELATED LATEST NEWS

Top Headlines

ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಲ್ಲಿ ಮುಡಾ ಸೈಟ್ ಹಂಚಿಕೆ.. 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಮೈಸೂರು ಲೋಕಾಯುಕ್ತ ದಾಖಲಿಸಿದ FIR

Live Cricket

Add Your Heading Text Here