ವಿಜಯಪುರ : ಟ್ರಾಫಿಕ್ ಎಎಸ್‌ಐ ಕಾರು ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ವಿಜಯಪುರ ನಗರದ ಬೇಗಂ ತಲಾಬ್ ಪ್ರವೇಶ ದ್ವಾರದ ಬಳಿ ನಡೆದಿದೆ. ಓವರ್ ಸ್ಪೀಡ್ ಡ್ರೈವಿಂಗ್ ವಿಚಾರದಲ್ಲಿ ಟ್ರಾಫಿಕ್ ಎಎಸ್‌ಐ ನಿಖಿಲ್ ಕಾಂಬ್ಳೆ ಹಾಗೂ ಕಾರು ಚಾಲಕನ ನಡುವೆ ಗಲಾಟೆ ಆಗಿದೆ.
ಹಲ್ಲೆಗೊಳಗಾದ ಕಾರು ಚಾಲಕನ ಹೆಸರು ತಿಳಿದು ಬಂದಿಲ್ಲ. ಕಾರು ಚಾಲಕನಿಗೆ ಅವಾಚ್ಯ ಶಬ್ಧದಿಂದ ನಿಂದಿಸಿ ಎಎಸ್‌ಐ ಹಲ್ಲೆ ನಡೆಸಿದ್ದಾರೆ. ಚಾಲಕನಿಗೆ ಸಿನಿಮಾ ಸ್ಡೈಲ್ನಲ್ಲಿ ಪಂಚ್ ಮಾಡಿ ಗೂಂಡಾ ವರ್ತನೆ ತೋರಿಸಿದ್ದಾರೆ.
ಗೂಂಡಾಗಿರಿ ಯಾಕೆ ಮಾಡ್ತಿರಾ? ಎಂದು ಪ್ರಶ್ನೆ ಮಾಡಿದ ಕಾರ್ ಚಾಲಕನಿಗೆ ಎಎಸ್‌ಐ ಗೂಸಾ ನೀಡಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ – ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಎಂ ಸಿದ್ದು ಸ್ಪಷ್ಟನೆ..
Post Views: 609