ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಲಿದೆ. ಸಿಎಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿಕೆ ಮಾಡಿದ್ದ ಹೈಕೋರ್ಟ್, ಅಲ್ಲಿಯವರಗೂ ಯಾವುದೇ ಯಾವುದೇ ಕ್ರಮ ಜರುಗಿಸದಂತೆ ನಿರ್ದೇಶನ ನೀಡಿತ್ತು.
ಆಗಸ್ಟ್ 19ರಂದು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಆಗಸ್ಟ್ 29ರ ತನಕ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಅಧೀನ ನ್ಯಾಯಾಲಯಕ್ಕೆ ಸೂಚನೆ ನೀಡಿ, ವಿಚಾರಣೆ ಮುಂದೂಡಿತ್ತು. ಗುರುವಾರ ಸಿಎಂ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಾಡಿದ್ದರು. ಎರಡೂ ಕಡೆ ವಾದ ಆಲಿಸಿದ ನ್ಯಾಯಾದೀಶ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆಯನ್ನ ಆಗಸ್ಟ್ 31ಕ್ಕೆ ಮುಂದೂಡಿದ್ದರು.
ಇಂದು ಬೆಳಗ್ಗೆ 10.30ಕ್ಕೆ ಮತ್ತೆ ಸಿಎಂ ಕೇಸ್ನ ವಿಚಾರಣೆ ನಡೆಯಲಿದ್ದು, ಎಲ್ಲಾ ಪ್ರತಿವಾದಿಗಳು ಇಂದು ವಾದ ಮುಗಿಸಲು ಸೂಚನೆ ನೀಡಿದ್ದಾರೆ. ಇಂದು ಗವರ್ನರ್ ಪರ ವಕೀಲ ತುಷಾರ್ ಮೆಹ್ತಾ ವಾದ ಮಂಡನೆ ಮಾಡಲಿದ್ದಾರೆ. ಖಾಸಗಿ ದೂರುದಾರರ ಪರ ವಕೀಲರಿಂದಲೂ ವಾದ ಮಂಡನೆಯಾಗಲಿದ್ದು, ಇಂದೇ ವಾದ-ಪ್ರತಿವಾದ ಮುಗಿದರೆ ಸಂಜೆ ವೇಳೆಗೆ ತೀರ್ಪು ಬರುವ ಸಾಧ್ಯತೆಯಿದೆ.
ಮತ್ತೆ ಸಿಎಂ ಪರ ವಕೀಲರಿಗೆ ವಾದ ಮಂಡನೆ ಅವಕಾಶ ಸಿಕ್ಕರೆ ಮತ್ತೆ ವಿಚಾರಣೆ ಮುಂದೂಡಿಕೆಯಾಗಬಹುದು.
ಇದನ್ನೂ ಓದಿ : ಡಿವೋರ್ಸ್ ಪಡೆದರೂ ಒಂದಾದ ಚಂದನ್ ಶೆಟ್ಟಿ-ನಿವೇದಿತಾ ಗೌಡ : ಅದ್ಹೇಗೆ ಗೊತ್ತಾ?