Download Our App

Follow us

Home » ರಾಜ್ಯ » ತಿರುಪತಿ ಲಡ್ಡುವಿನಲ್ಲಿ ಕೊಬ್ಬಿನಾಂಶ ಇದ್ದಿದ್ದು ನಿಜ – ತಪ್ಪೊಪ್ಪಿಕೊಂಡ ಟಿಟಿಡಿ..!

ತಿರುಪತಿ ಲಡ್ಡುವಿನಲ್ಲಿ ಕೊಬ್ಬಿನಾಂಶ ಇದ್ದಿದ್ದು ನಿಜ – ತಪ್ಪೊಪ್ಪಿಕೊಂಡ ಟಿಟಿಡಿ..!

ಆಂಧ್ರಪ್ರದೇಶ : ತಿರುಪತಿ ದೇವಸ್ಥಾನದ ಲಡ್ಡು ತಯಾರಿಸಲು ಕಲಬೆರಕೆ ತುಪ್ಪ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಟಿಟಿಡಿ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿದ ಟಿಟಿಡಿ ಎಕ್ಸ್‌ಕ್ಯೂಟೀವ್‌ ಆಫೀಸರ್‌ ಶ್ಯಾಮಲ ರಾವ್ ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದ ತಯಾರಿಸಲು ಕಲಬೆರಕೆ ತುಪ್ಪ ಬಳಕೆ ಮಾಡಿರೋದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಈ ಹಿಂದೆ ಕಂಪನಿಯೊಂದು ಕಡಿಮೆ ದರಕ್ಕೆ ತುಪ್ಪ ನೀಡುತ್ತಿತ್ತು, ಈ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ರು. ಕೂಡಲೇ ಲ್ಯಾಬ್​ಗಳಿಗೆ ಆ ತುಪ್ಪವನ್ನ ಕಳಿಸಿದ್ದೆವು, NDDB, CAF ಲ್ಯಾಬ್​ನಲ್ಲಿ ಪರೀಕ್ಷೆ ನಡೆದಿತ್ತು. ದನದ ಕೊಬ್ಬಿನಾಂಶ, ಹಂದಿಯ ಕೊಬ್ಬಿನಾಂಶ, ಸೂರ್ಯಕಾಂತಿ ಎಣ್ಣೆ ಬೆರಕೆ ಆಗಿರೋದು ಪತ್ತೆಯಾಯ್ತು. ಹೀಗಾಗಿ ಕಡಿಮೆ ದರದ ತುಪ್ಪದ ಖರೀದಿ ನಿಲ್ಲಿಸಲಾಯ್ತು. AR ಡೈರಿ ಖಾಸಗಿ ಕಂಪನಿ ಈ ತುಪ್ಪ ಪೂರೈಸುತ್ತಿತ್ತು ಎಂದು ಟಿಟಿಡಿ ಸಿಇಓ ಶ್ಯಾಮಲ ರಾವ್ ಹೇಳಿದ್ದಾರೆ.

ಲ್ಯಾಬ್‌ನ ವರದಿಯಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬುದು ದೃಢಪಟ್ಟಿದೆ. ಟಿಟಿಡಿ ಮಾಹಿತಿ ಬೆನ್ನಲ್ಲೇ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದು, ಆಂಧ್ರ ಸರ್ಕಾರ ತನಿಖೆಗೆ ಆದೇಶ ಮಾಡಿದೆ.

ಇದನ್ನೂ ಓದಿ : ಜೀ5 ಒಟಿಟಿಯಲ್ಲಿ ಮಲಯಾಳಂನ ‘ನುನಕ್ಕುಳಿ’ ಚಿತ್ರ – 100 ಮಿಲಿಯನ್ಸ್ ಸ್ಕ್ರೀಮಿಂಗ್ ಮಿನಿಟ್ ಕಂಡ ಬೇಸಿಲ್ ಜೋಸೆಫ್ ಸಿನಿಮಾ..!

Leave a Comment

DG Ad

RELATED LATEST NEWS

Top Headlines

ಚಿತ್ರದುರ್ಗ : ಹೆಂಡತಿ ಮೇಲಿನ ಸಿಟ್ಟಿಗೆ ಅತ್ತೆ-ಮಾವನನ್ನ ಬರ್ಬರವಾಗಿ ಹತ್ಯೆ ಮಾಡಿದ ಪಾಪಿ ಅಳಿಯ..!

ಚಿತ್ರದುರ್ಗ : ಹೆಂಡತಿ ಮೇಲಿನ ಸಿಟ್ಟಿಗೆ ಪಾಪಿ ಪತಿ ಹೆಣ್ಣು ಕೊಟ್ಟ ಅತ್ತೆ ಮಾವನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

Live Cricket

Add Your Heading Text Here