ಉತ್ತರ ಪ್ರದೇಶ : ಅಯೋಧ್ಯೆಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಮೂವರು ಶಂಕಿತರನ್ನು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ ಅರೆಸ್ಟ್ ಮಾಡಿದೆ.
ಪೊಲೀಸರು ಅಯೋಧ್ಯೆ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಚಲನವಲನದಲ್ಲಿ ಅನುಮಾನ ಬಂದ ಹಿನ್ನೆಲೆಯಲ್ಲಿ ರಾಜಸ್ಥಾನ ಮೂಲದ ಧರ್ಮವೀರ್ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಕೆನಡಾ ಮೂಲದ ಗ್ಯಾಂಗ್ ಸ್ಟರ್ ಭಂಟರಾಗಿದ್ದು, ಇಬ್ಬರೂ ಹರ್ಷ ಸಲ್ಲಾ ಗ್ಯಾಂಗ್ಗೆ ಸೇರಿದವರು ಅನ್ನೋ ಮಾಹಿತಿ ಲಭ್ಯವಾಗಿದೆ.
ರಾಮಮಂದಿರ ಉದ್ಘಾಟನೆ ಹೊತ್ತಲ್ಲೇ ಅಯೋಧ್ಯೆಗೆ ಬಂದಿದ್ದೇಕೆ..? ಏನಾದ್ರೂ ಸಂಚು ರೂಪಿಸಲಾಗಿತ್ತೇ ಅನ್ನೋ ಶಂಕೆ ಮೇಲೆ ವಿಚಾರಣೆ ನಡೆಸಲಾಗಿದೆ. ಹಾಗೆಯೇ ಸಂಘಟನೆ ಜೊತೆ ಲಿಂಕ್ ಹೊಂದಿರುವ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ.
ಶ್ರೀರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಉತ್ತರಪ್ರದೇಶ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದೆ. ಡ್ರೋಣ್ ಗಳ ಮೂಲಕ ಕಣ್ಗಾವಲು ಹೆಚ್ಚಿಸಿದ್ದು, ನಗರದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದೆ.
ಇದನ್ನೂ ಓದಿ : ಆನೇಕಲ್ : ನಿರ್ಮಾಣ ಹಂತದ ಶಾಲಾ ಕಟ್ಟಡ ಕುಸಿತ, ಇಬ್ಬರು ಸಾ*ವು..!