ದಾವಣಗೆರೆ : ಮುಸ್ಲಿಂ ಸಮುದಾಯಕ್ಕೆ ಸೇರಿದ ದೇವರನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಜಿಲ್ಲೆಯ ಹಳೇ ಕುಂದುವಾಡದಲ್ಲಿ ನಡೆದಿದೆ. ಕಳ್ಳರು ಪ್ರಾರ್ಥನಾ ಮಂದಿರದ ಬಾಗಿಲು ಒಡೆದು ನುಗ್ಗಿ ಕಳ್ಳತನ ಮಾಡಿದ್ದಾರೆ. ಖದೀಮರು ಹಸನ್ ಹುಸೇನ್ ಎಂಬ ದೇವರನ್ನು ಕದ್ದೊಯ್ದಿದ್ದಾರೆ.
ಅಲಿ ದೇವರು ಹಲವು ಪವಾಡಗಳಿಗೆ ಹೆಸರು ವಾಸಿಯಾಗಿದ್ದು, ಮುಂದಿನ ವಾರ ಮೊಹರಂ ಇರೋದ್ರಿಂದ ತಯಾರಿಗೆ ಬಂದಾಗ ದೇವರ ಮೂರ್ತಿ ಕಳೆದ ರಾತ್ರಿ ಕಳವಾಗಿರೋದು ಪತ್ತೆಯಾಗಿದೆ. ದೇವರ ಪೆಟ್ಟಿಗೆಯ ಬೀಗ ಒಡೆದು ಎರಡು ದೇವರ ಮೂರ್ತಿಯನ್ನು ಕದ್ದಿದ್ದಾರೆ. ಮೂರ್ತಿ ಕಳುವಾದ ಕಾರಣ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದ್ದು, ಈ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ವಾಲ್ಮೀಕಿ ನಿಗಮದ ಬಹುಕೋಟಿ ವರ್ಗಾವಣೆ ಕೇಸ್ : ಮಾಜಿ ಸಚಿವ ನಾಗೇಂದ್ರ ಹಾಗೂ ಆಪ್ತರಿಗೆ SIT ನೋಟಿಸ್..!
Post Views: 100