Download Our App

Follow us

Home » ಅಪರಾಧ » ಬೆಂಗಳೂರಿನಲ್ಲಿ ಗೋಲ್ಡ್ ಕಂಪನಿಗೆ ನುಗ್ಗಿ ಸುಮಾರು 250 ಗ್ರಾಂ ಚಿನ್ನ, 1.8 ಲಕ್ಷ ನಗದು ದೋಚಿದ ಖತರ್ನಾಕ್ ಕಳ್ಳರು..!

ಬೆಂಗಳೂರಿನಲ್ಲಿ ಗೋಲ್ಡ್ ಕಂಪನಿಗೆ ನುಗ್ಗಿ ಸುಮಾರು 250 ಗ್ರಾಂ ಚಿನ್ನ, 1.8 ಲಕ್ಷ ನಗದು ದೋಚಿದ ಖತರ್ನಾಕ್ ಕಳ್ಳರು..!

ಬೆಂಗಳೂರು : ಗೋಲ್ಡ್ ಕಂಪನಿಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ನಗರದ ನೆಟ್ಟಕಲ್ಲಪ್ಪ ಸರ್ಕಲ್​​ನ ಬೆನಕಾಗೋಲ್ಡ್ ಕಂಪನಿಯಲ್ಲಿ ನಡೆದಿದೆ. ಕಳೆದ ರಾತ್ರಿ ಮೂರು ಕಬ್ಬಿಣದ ಗೇಟ್ ಬೀಗ ಮುರಿದು ಸುಮಾರು 250 ಗ್ರಾಂ ಚಿನ್ನ, 1.8 ಲಕ್ಷ ನಗದು ದೋಚಿ ಖತರ್ನಾಕ್ ಕಳ್ಳರು ಪರಾರಿಯಾಗಿದ್ದಾರೆ.

ಬೆನಕಾಗೋಲ್ಡ್ ಕಂಪನಿ ಗ್ರಾಹಕರಿಂದ ಚಿನ್ನಭರಣ ಖರೀದಿ ಮಾಡುತ್ತದೆ. ಬಸವನಗುಡಿ ಪೊಲೀಸ್ ಠಾಣೆ ಸಮೀಪದಲ್ಲೇ ಬೆನಕ ಗೋಲ್ಡ್​ ಕಂಪನಿ ಕಛೇರಿ ಇದ್ದು, ನಿನ್ನೆ ಸಿಬ್ಬಂದಿ ಸಂಜೆ ಕಚೇರಿಗೆ ಬೀಗ ಹಾಕಿ ಹೋಗಿದ್ದ.

ಮಧ್ಯರಾತ್ರಿ ಕಳ್ಳರು ಕಛೇರಿಗೆ ನುಗ್ಗಿ ಚಿನ್ನ, ಹಣ ದೋಚಿ ಪರಾರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಸಿಸಿ ಕ್ಯಾಮರಾ ಡಿವಿಆರ್ ಕೂಡಾ ಕದ್ದು ಕಳ್ಳರು ಎಸ್ಕೇಪ್​​ ಆಗಿದ್ದಾರೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬೆಂಗಳೂರು : ಜೈಲಿನಿಂದಲೇ ಯುವತಿಗೆ ನಗ್ನ ಫೋಟೋ ಕಳುಹಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ ರೌಡಿಶೀಟರ್​​..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here