Download Our App

Follow us

Home » ಅಪರಾಧ » ಹಾನಗಲ್​​ ನೈತಿಕ ಪೊಲೀಸ್​ಗಿರಿಗೆ ಭಯಾನಕ ಟ್ವಿಸ್ಟ್ : 7 ಮಂದಿ ಮುಸ್ಲಿಂ ಯುವಕರಿಂದ ಗ್ಯಾಂಗ್​ ರೇಪ್ ಆರೋಪ..!

ಹಾನಗಲ್​​ ನೈತಿಕ ಪೊಲೀಸ್​ಗಿರಿಗೆ ಭಯಾನಕ ಟ್ವಿಸ್ಟ್ : 7 ಮಂದಿ ಮುಸ್ಲಿಂ ಯುವಕರಿಂದ ಗ್ಯಾಂಗ್​ ರೇಪ್ ಆರೋಪ..!

ಹಾವೇರಿ : ಹಾನಗಲ್​​ ನೈತಿಕ ಪೊಲೀಸ್​ಗಿರಿಗೆ ಇದೀಗ ಭಯಾನಕ ಟ್ವಿಸ್ಟ್​ ಸಿಕ್ಕಿದೆ. ಅನ್ಯಕೋಮಿನ ಪುರುಷನೊಂದಿಗೆ ಸಿಕ್ಕಿ ಬಿದ್ದ ಮಹಿಳೆಯನ್ನು ಹೋಟೆಲ್​​ನಲ್ಲಿ ಹಲ್ಲೆ ಮಾಡಿದ ಬಳಿಕ ಕಾಡಿಗೆ ಒಯ್ದು ರೇಪ್​​ ಮಾಡಿದ್ದಾರೆ. ಏಳು ಮಂದಿ ಮುಸ್ಲಿಂ ಯುವಕರಿಂದ ಗ್ಯಾಂಗ್​ ರೇಪ್​​​ ಆಗಿದೆ.

ಜ.08 ಅನ್ಯಕೋಮಿನ ಇಬ್ಬರು ವಿವಾಹಿತರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕ್ಲಕ್ರಾಸ್ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು.

ಇದನ್ನು ಕಂಡ ಕೆಲ ಮುಸ್ಲಿಂ ಯುವಕರು ಏಕಾಏಕಿ ಹೋಟೆಲ್ ಗೆ ನುಗ್ಗಿ ದಾಂಧಲೆ ಮಾಡಿ ಮಹಿಳೆ ಮತ್ತು ಪುರುಷನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಹಲ್ಲೆ ಮಾಡುವಾಗ ವಿಡಿಯೋ ಮಾಡಿಕೊಂಡಿದ್ದರು. ಇದೀಗ ಈ ಘಟನೆಯ 2 ವಿಡಿಯೋ ವೈರಲ್ ಆಗಿದೆ.

ಈ ಪುಂಡರು ಮುಸ್ಲಿಂ ಮಹಿಳೆಯರು, ಹುಡುಗಿಯರನ್ನ ಟಾರ್ಗೆಟ್ ಮಾಡಿಕೊಂಡಿದ್ದರು. ಹಿಂದೂ ಹುಡಗರ ಜೊತೆ ಕಾಣಿಸಿಕೊಂಡ ಮುಸ್ಲಿಂ ಹುಡುಗಿಯರು, ಮಹಿಳೆಯರನ್ನ ಟಾರ್ಗೆಟ್ ಮಾಡ್ತಿದ್ದರು. ಜೋಡಿ ಹಕ್ಕಿಗಳ ಮೇಲೆ‌ ಅಟ್ಯಾಕ್ ಮಾಡಿ ಹುಡುಗಿಯರನ್ನ ಎಳೆದೊಯ್ಯುತ್ತಿದ್ದರು.

ಇದೀಗ ಎರಡನೇ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಾನಗಲ್ ಜನರು ಬೆಚ್ಚಿ ಬಿದ್ದಿದ್ದಾರೆ. ಆರೋಪಿಗಳು ಮುಸ್ಲಿಂ ಮಹಿಳೆಯನ್ನು ಕಾರಿನಲ್ಲಿ ಎಳೆದೊಯ್ದು ಚಿತ್ರಹಿಂಸೆ ನೀಡಿರುವ ವಿಡಿಯೋ ವೈರಲ್ ಆಗಿದೆ.

ಥಳಿತಕ್ಕೊಳಗಾದ ಮಹಿಳೆಯಿಂದ ಈಗ ಅತ್ಯಾಚಾರ ಆರೋಪ ವ್ಯಕ್ತವಾಗಿದೆ. ಒಬ್ಬರಾದ ಮೇಲೆ ಒಬ್ಬರು ನನ್ನ ರೇಪ್ ಮಾಡಿದ್ರು  ಎಂದು ಮಹಿಳೆ ಆರೋಪಿಸಿದ್ದಾರೆ.

ನನ್ನ ಪತ್ನಿ ಮೇಲೆ ಗ್ಯಾಂಗ್​ ರೇಪ್​ ಆಗಿದೆ, ಪತ್ನಿಯನ್ನು ಕಿಡ್ನಾಪ್ ಮಾಡಿ ರೇಪ್ ಮಾಡಿದ್ದಾರೆ. ಕಾಡಿಗೆ ಎಳೆದೊಯ್ದು ರೇಪ್​ ಮಾಡಿರೋ ವಿಡಿಯೋ ಇದೆ ಎಂದು ಥಳಿತಕ್ಕೊಳಗಾದ ಮಹಿಳೆ ಪತಿ ತೌಸೀಫ್​​ ಆರೋಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್​ ಗ್ಯಾರೆಂಟಿ ಸಮಿತಿಗೆ BJP, JDSನಿಂದ ವಿರೋಧ..

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here