ಚಿಕ್ಕೋಡಿ: ಸರ್ಕಾರಿ ಬಸ್ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಿನ್ನೆ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ 60 ವರ್ಷದ ನಿರ್ಮಲ ಅವಟೆ ಮೃತಪಟ್ಟ ಮಹಿಳೆ. ಕಾರು ಚಲಾಯಿಸುತ್ತಿದ್ದ ಚಿಕ್ಕೋಡಿ ಹೆಸ್ಕಾಂ ಉಪವಿಭಾಗ ಸಹಾಯಕ ಅಭಿಯಂತರ ನೇಮಿನಾಥ ಅವಟೆ (43) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕೋಡಿ ಪಟ್ಟಣದ ಯಾದವ ನಗರದಲ್ಲಿ ವಾಸಿಸವಿದ್ದ ಇವರು ಕಾರಿನಲ್ಲಿ ಸಂಚರಿಸುವ ವೇಳೆ ಉಮರಾಣಿ ಹತ್ತಿರ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ನೇಮಿನಾಥ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪ್ರಧಾನಿ ಮೋದಿಯವರನ್ನು ಭೇಟಿಯಾದ ವಿಶ್ವ ಚೆಸ್ ಚಾಂಪಿಯನ್ ಗುಕೇಶ್..!
Post Views: 970