Download Our App

Follow us

Home » ಸಿನಿಮಾ » ‘ಖದೀಮ’ ಚಿತ್ರದ ಟೀಸರ್ ರಿಲೀಸ್, ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದ ಜಿಮ್ ಟ್ರೈನರ್ ಚಂದನ್..!

‘ಖದೀಮ’ ಚಿತ್ರದ ಟೀಸರ್ ರಿಲೀಸ್, ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದ ಜಿಮ್ ಟ್ರೈನರ್ ಚಂದನ್..!

ಕನ್ನಡ ಚಿತ್ರರಂಗದಲ್ಲಿ ಹೊಸಬರ ಅಬ್ಬರ ಜೋರಾಗಿದೆ. ಹಲವು ಹೊಸಬರು ಕ್ವಾಲಿಟಿ ಜೊತೆಗೆ, ಕಂಟೆಂಟ್ ವುಳ್ಳ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ. ದೊಡ್ಡ ಗೆಲುವು ಸಾಧಿಸದಿದ್ದರೂ ಪ್ರಶಂಸೆಯನ್ನು ಪಡೆದು ಪ್ರೇಕ್ಷಕರ ಆದರಣೆಗೆ ಪಾತ್ರರಾಗುತ್ತಿದ್ದಾರೆ. ಹೊಸ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಮತ್ತೊಂದು ಹೊಸಬರ ಸಿನಿಮಾ ಬಿಡುಗಡೆಗೆ ತಯಾರಾಗಿದೆ.

ಶಿವೇಶು ಪ್ರೊಡಕ್ಷನ್ ಚೊಚ್ಚಲ ಹೆಜ್ಜೆ ಖದೀಮ ಸಿನಿಮಾ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿ ಬಿಡುಗಡೆಗೆ ಹಂತಕ್ಕೆ ಬಂದಿದೆ. ಯುವ ಸಿನಿ ಸಿನಿಮೋತ್ಸಾಹಿಗಳೇ ಸೇರಿಕೊಂಡು ತಯಾರಿಸಿರುವ ಈ ಚಿತ್ರಕ್ಕೆ ಟಿ ಶಿವಕುಮಾರನ್ ಹಣ ಹಾಕಿದ್ದು, ಇದು ಇವರ ಮೊದಲ ಪ್ರಯತ್ನವಾಗಿದೆ. ಇವರ ಈ ಸಾಹಸಕ್ಕೆ ಸಹ ನಿರ್ಮಾಪಕಿಯಾಗಿ ಯಶಸ್ವಿನಿ ಸಾಥ್ ಕೊಟ್ಟಿದ್ದಾರೆ. ಚಿತ್ರರಂಗದ ಮೇಲಿನ ಅಪಾರ ಅಭಿಮಾನ ಹಾಗೂ ಆಸಕ್ತಿಯಿಂದಾಗಿ ಇವರು ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು,‌ ನೋಡುಗರ ಗಮನಸೆಳೆಯುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಟೀಸರ್ ಕಾರ್ಯಕ್ರಮದಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ‌ ಹಂಚಿಕೊಂಡಿದೆ.

ನಿರ್ದೇಶಕ ಸಾಯಿ ಪ್ರದೀಪ್ ಮಾತನಾಡಿ, ಟೀಸರ್ ನೋಡಿದ್ದೀರ. ಅತಿ ಶೀಘ್ರದಲ್ಲೇ ಆಡಿಯೋ ಲಾಂಚ್, ಟ್ರೇಲರ್ ಲಾಂಚ್ ಆಗುತ್ತದೆ. ಅತಿ ಶೀಘ್ರದಲ್ಲಿ ಬೆಳ್ಳಿ ಪರದೆಗೆ ಬರಬೇಕೆಂದು ಪ್ರಯತ್ನ ಮಾಡುತ್ತಿದ್ದೇವೆ. ಖದೀಮ ಒಳ್ಳೆ ಸಿನಿಮಾ. ಪದ ಬಳಕೆ ಹಾಗೂ ದೃಶ್ಯಗಳಲ್ಲಿ ಅಸಭ್ಯ ಹಾಗೂ ಅಸಹ್ಯ ಬರುವುದಿಲ್ಲ. ಚಿಕ್ಕ‌ಮಕ್ಕಳಿಂದ ದೊಡ್ಡವರು ನೋಡುವ ಕನ್ನಡ ಸಿನಿಮಾ ಎಂದರು.

ನಟ ಚಂದನ್ ಮಾತನಾಡಿ, ನಿನ್ನೆವರೆಗೂ ನಾನು ಚಂದನ್. ಈಗ ಖದೀಮ. ಸಿನಿಮಾ ನೋಡಿದ ಮೇಲೆ ಚಂದನ್ ಅನ್ನುವುದನ್ನು ಮರೆತು ಖದೀಮ ಎಂದು ಕರೆಯುತ್ತಾರೆ. ನಾನು ಖದೀಯುತ್ತೇನೆ. ಏನು ಕದಿದ್ದೇನೆ ಅನ್ನೋದಕ್ಕೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನಮ್ಮ ಗುರುಗಳು ದಯಾನಂದ್ ಅಂಕಲ್ ಧನ್ಯವಾದ. ಶಶಾಂಕ್ ಸರ್ ಇಲ್ಲ ಅಂದಿದ್ದರೆ ಖದೀಮ ಸ್ವಲ್ಪ ಕಷ್ಟವಾಗುತಿತ್ತು. ಟೈಟಲ್ ನನ್ನ ಪಾತ್ರ. ಖದೀಮ ಎಂಬ ಪಾತ್ರಕ್ಕೆ ಕಷ್ಟಪಟ್ಟಿದ್ದೇನೆ. ಸಿಕ್ಸ್ ಪ್ಯಾಕ್ ಮಾಡಿ ರೆಡಿಯಾಗ್ಲಾ ಎಂದು ಡೈರೆಕ್ಟರ್ ಕೇಳಿದೆ. ಅವರು ರೋಡಲ್ಲಿ ಬಿಟ್ಟಿರುವ ಹೋರಿಯಂಗೆ ಕಾಣಬೇಕು ಎಂದರು.

ಟೈಟಲ್ ಹೇಳುವಂತೆ ಖದೀಮನ ಕಥೆ ಜೊತೆ ಆಕ್ಷನ್ ಕಥಾಹಂದರ ಹೊಂದಿರುವ ಈ ಸಿನಿಮಾ ಮೂಲಕ ಜಿಮ್ ಟ್ರೈನರ್ ಚಂದನ್ ಹೀರೋ ಸ್ಯಾಂಡಲ್ ವುಡ್ ಗೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಯುಐ ಸಿನಿಮಾದ ಟ್ರೋಲ್ ಹಾಡಿನಲ್ಲಿ ಕಾಣಿಸಿಕೊಂಡಿರುವ ಅನುಷಾ ನಾಯಕಿಯಾಗಿ ನಟಿಸಿದ್ದಾರೆ. ಶೋಭಾರಾಜ್, ಮಿಮಿಕ್ರಿ ದಯಾನಂದ್, ಗಿರಿಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ಗಿರಿಜಾ‌ ಲೋಕೇಶ್ ಅವರಂತಹ ಹಿರಿಯ ಹಾಗೂ ಅನುಭವಿ ಕಲಾದಂಡು ಚಿತ್ರದಲ್ಲಿದೆ.

ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಒಂದಷ್ಟು ಸಿನಿಮಾದಲ್ಲಿ ದುಡಿದಿರುವ ಸಾಯಿ ಪ್ರದೀಪ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ , ವಿಕ್ರಂ ಮೋರ್ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನ, ರಾಜು ನೃತ್ಯ ಸಂಯೋಜನೆ, ನಾಗಾರ್ಜುನ್ ಛಾಯಾಗ್ರಹಣ ಹಾಗೂ ಉಮೇಶ್ ಸಂಕಲನ ಖದೀಮ ಸಿನಿಮಾಕ್ಕಿದೆ.

ಚೇತನ್ ಕುಮಾರ್, ಪ್ರಮೋದ್ ಮರವಂತೆ ಹಾಗೂ ವೆಂಕಟೇಶ್ ಕುಲಕರ್ಣಿ ಹಾಗುಯ ಕವಿರಾಜ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್, ವಾಸುಕಿ ವೈಭವ್, ಚಂದನ್ ಶೆಟ್ಟಿ ಹಾಗೂ ಮಲಯಾಳಂನ ಯಾಸಿನ್ ನಾಜಿರ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಬೆಂಗಳೂರು ಸುತ್ತಮುತ್ತ, ಬೆಂಗಳೂರಿನ ಸಿಟಿ ಮಾರ್ಕೆಟ್ ಹಾಗೂ ಕೇರಳದಲ್ಲಿ ಒಂದನ್ನು ಹಾಡನ್ನು ಚಿತ್ರೀಕರಿಸಲಾಗಿದೆ.‌

ಇದನ್ನೂ ಓದಿ : ಮೈಸೂರಿನ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ನಿಧನ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಸವಾರ ದುರ್ಮರಣ..!

ಬೆಂಗಳೂರು : ನಗರದಲ್ಲಿ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಸವಾರ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್ 32 ವರ್ಷ ಅಪಘಾತದಲ್ಲಿ

Live Cricket

Add Your Heading Text Here