ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೆ ಕ್ಷಿಪ್ರಕ್ರಾಂತಿ ನಡೆಯುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ಸರ್ಕಾರವನ್ನ ಉರುಳಿಸಲು ಸ್ವ-ಪಕ್ಷದ ಶಾಸಕರೇ ಸ್ಕೆಚ್ ಹಾಕಿರುವ ಸ್ಫೋಟಕ ಸತ್ಯ ಹೊರಬಿದ್ದಿದೆ.
ಸಿದ್ದು ಸರ್ಕಾರ ಉರುಳಿಸೋಕೆ ಕಾಂಗ್ರೆಸ್ನಲ್ಲೇ ಟೀಂ ರೆಡಿಯಾಗಿದೆ. 2 ದಿನಗಳ ಹಿಂದೆಯಷ್ಟೇ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಯವರನ್ನು 2 ಕೈ MLAಗಳು ಭೇಟಿಯಾಗಿದ್ದರು. ಇಬ್ಬರು ಬೆಂಗಳೂರಿನ ಕಾಂಗ್ರೆಸ್ ಶಾಸಕರು ರಹಸ್ಯವಾಗಿ ಭೇಟಿ ನೀಡಿ, ನಮಗೆ ಮುಂದೆ ಕಾಂಗ್ರೆಸ್ನಲ್ಲಿ ಭವಿಷ್ಯ ಇಲ್ಲ. ಗ್ಯಾರೆಂಟಿ ಬಗ್ಗೆ ಜನಕ್ಕೆ ನಂಬಿಕೆ ಇಲ್ಲ, ಅನುದಾನ ಕೊಡ್ತಿಲ್ಲ. ಅಭಿವೃದ್ಧಿ ಆಗದೆ ಕ್ಷೇತ್ರದಲ್ಲಿ ಓಡಾಡೋಕ್ಕೂ ಆಗ್ತಿಲ್ಲ, ಟೆಂಡರ್ ಬಿಲ್ಗಳಲ್ಲಿ ಮಂತ್ರಿಗಳು ಕಮಿಷನ್ ಕೇಳ್ತಿದ್ದಾರೆ, ಸಿಎಂಗೆ ದೂರು ಕೊಟ್ರೂ ಯಾವುದೆ ಪ್ರಯೋಜನ ಆಗ್ತಿಲ್ಲ ಎಂದು ಹೇಳಿದ್ದಾರೆ.
ನೀವು ಹೂಂ ಅಂದ್ರೆ ನಾವು ಒಂದು ಟೀಂ ಕರ್ಕೊಂಡ್ ಬರ್ತೀವಿ, ಹಳೇ ಮೈಸೂರಲ್ಲಿ 30 ಶಾಸಕರ ತಂಡ ರೆಡಿ ಮಾಡ್ಥೀವಿ ಎಂದು HDKಗೆ 30 ಮಂದಿ ಕರೆತರೋ ಬಗ್ಗೆ ಕಾಂಗ್ರೆಸ್ ಶಾಸಕರು ಪ್ರಾಮಿಸ್ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಬಳಿ 30 ಜನ ಇದ್ದಾರೆ, ನೀವು ಸಂಪರ್ಕಿಸಿ. ನಂಬರ್ ತರೋದು ನಮಗೆ ಬಿಡಿ, ಕಾನೂನು ನೀವು ನೋಡ್ಕೊಳ್ಳಿ. ಮುಂದಿನ ವಾರವೇ ಅತೃಪ್ತ ಶಾಸಕರೆಲ್ಲಾ ಸಭೆ ಸೇರುತ್ತೇವೆ, ಅಷ್ಟರಲ್ಲಿ ನಿಮ್ಮ ತೀರ್ಮಾನ ತಿಳಿಸಿ ಎಂದು ಕಾಂಗ್ರೆಸ್ MLA ಹೇಳಿದ್ದಾರೆ.
ಈ ವೇಳೆ ಹೆಚ್ಡಿ ಕುಮಾರಸ್ವಾಮಿಯವರು ದಿಲ್ಲಿಯಲ್ಲಿ ಮಾತಾಡ್ತೇನೆ, 1 ತಿಂಗಳು ಟೈಂ ಕೊಡಿ ಎಂದು ಹೇಳಿದ್ದಾರೆ. ಬೆಂಗಳೂರು ರಹಸ್ಯ ಸಭೆ ಬೆನ್ನಲ್ಲೇ ಜಾರಕಿಹೊಳಿ ದಿಲ್ಲಿಗೆ ಹಾರಿದ್ದು, ಸಹೋದರ ಸತೀಶ್ ಮನವೊಲಿಸಿ ಕರೆ ತರುತ್ತಾರಾ ರಮೇಶ್. ಭಾರೀ ಕುತೂಹಲ ಘಟ್ಟ ತಲುಪಿದ ಸರ್ಕಾರವನ್ನ ಇದೀಗ ಬೀಳಿಸೋ ಆಟ ಶುರುವಾಗಿದೆ.
ಇದನ್ನೂ ಓದಿ : ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಖಂಡಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರೊಟೆಸ್ಟ್..!