Download Our App

Follow us

Home » ಸಿನಿಮಾ » ಜೈಲಿನಲ್ಲಿರುವ ದರ್ಶನ್​​​ ಭೇಟಿಯಾಗಿ ಮದುವೆ ಇನ್ವಿಟೇಷನ್ ಕೊಟ್ಟ ತರುಣ್​​​ ಸುಧೀರ್..!

ಜೈಲಿನಲ್ಲಿರುವ ದರ್ಶನ್​​​ ಭೇಟಿಯಾಗಿ ಮದುವೆ ಇನ್ವಿಟೇಷನ್ ಕೊಟ್ಟ ತರುಣ್​​​ ಸುಧೀರ್..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಪಾಲಾಗಿರುವ ದರ್ಶನ್​​ನ್ನು ಕಾಟೇರ ಸಿನಿಮಾ ನಿರ್ದೇಶಕ ತರುಣ್​​​ ಸುಧೀರ್​​​​ ಭೇಟಿಯಾಗಿದ್ದಾರೆ. ದರ್ಶನ್ ಜೈಲು ಪಾಲಾದ ನಂತರ ಮೊದಲ ಬಾರಿಗೆ ತರುಣ್​​​ ಸುಧೀರ್ ಭೇಟಿ ಮಾಡಿದ್ದಾರೆ.

ತರುಣ್ ಸುಧೀರ್​-ಸೋನಾಲ್​​ ಮದುವೆ ಅಗಸ್ಟ್ 10 ಮತ್ತು11ಕ್ಕೆ ಫಿಕ್ಸಾಗಿದೆ. ಹಾಗಾಗಿ ಮದುವೆ ಇನ್ವಿಟೇಷನ್​​​ ನೀಡಲು ತರುಣ್​​​​ ಸುಧೀರ್ ಜೈಲಿಗೆ ಭೇಟಿ ನೀಡಿದ್ದಾರೆ. ದರ್ಶನ್ ಇಲ್ಲದೇ ಮದುವೆ ಮುಂದಕ್ಕೆ ಹಾಕಲು ತರುಣ್ ಸಜ್ಜಾಗಿದ್ದರು. ಆದರೆ ಹಿರಿಯರ ಸಲಹೆ, ದರ್ಶನ್ ಸಲಹೆ ಸಿಕ್ಕ ನಂತರ ಮದ್ವೆಗೆ ತಯಾರಿ ಮಾಡಿಕೊಂಡಿದ್ದಾರೆ. ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ತರುಣ್ ದರ್ಶನ್​ಗೆ ನೀಡಿದ್ದಾರೆ.

ಸ್ನೇಹಿತರ ಜೊತೆ ದರ್ಶನ್​​ನ್ನು​ ಭೇಟಿ ಮಾಡಿರುವ ತರುಣ್ ಸುಧೀರ್​​​​ ಮದುವೆಗೆ​ ಆಹ್ವಾನಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಎರಡು ಕಾರ್​ಗಳಲ್ಲಿ ದರ್ಶನ್​ನ್ನು ಭೇಟಿಯಾಗಲು ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು.

ಇದನ್ನೂ ಓದಿ : ಲೋಕಾ ದಾಳಿ​ ವೇಳೆ ಅಧಿಕಾರಿಯ ನೌಟಂಕಿ ಆಟ – ರೇಡ್ ಆಗ್ತಿದ್ದಂತೆ ಚಿನ್ನದ ಬ್ಯಾಗ್​​ ಹೊರಗೆಸೆದ ಡೆಪ್ಯೂಟಿ ಕಂಟ್ರೋಲರ್ ಅತ್ಹರ್​ ಅಲಿ..!

Leave a Comment

DG Ad

RELATED LATEST NEWS

Top Headlines

ರೇಣುಕಾಸ್ವಾಮಿ ಕರೆತಂದಿದ್ದ ಆಟೋಗೆ ರಿಲೀಸ್ ಭಾಗ್ಯ – ಆರೋಪಿ ಜಗದೀಶ್​​ಗೆ ಸೇರಿದ್ದ ವಾಹನ ಬಂಧಮುಕ್ತ!

ಚಿತ್ರದುರ್ಗ : ನಟ ದರ್ಶನ್​ ಮತ್ತು ಗ್ಯಾಂಗ್​ನಿಂದ​ ನಡೆದಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕೃತ್ಯಕ್ಕೆ ಬಳಸಿದ್ದ ಮೊದಲ ವಾಹನ ರಿಲೀಸ್​ಗೆ ಕೋರ್ಟ್​ ಆದೇಶ ಹೊರಡಿಸಿದೆ. ರೇಣುಕಾಸ್ವಾಮಿ

Live Cricket

Add Your Heading Text Here