ಕಲಬುರಗಿ : ಕೋರ್ಟ್ ಆವರಣದಲ್ಲೆ ವ್ಯಕ್ತಿ ಮೇಲೆ ತಲವಾರ್‌ನಿಂದ ದುಷ್ಕರ್ಮಿಗಳು ದಾಳಿ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಸಿನಿಮೀಯ ಶೈಲಿಯಲ್ಲಿ ಧೀರಜ್ ಎಂಬಾತನ ಮೇಲೆ ದುಷ್ಕರ್ಮಿಗಳು ತಲವಾರ್‌ನಿಂದ ಏಕಾಏಕಿ ದಾಳಿ ಮಾಡಿದ್ದಾರೆ.ಹಲ್ಲೆಗೊಳಗಾದ ಧೀರಜ್ನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ .
ಇನ್ನೂ ಸಾರ್ವಜನಿಕರು ಹಾಗೂ ವಕೀಲರು ದುಷ್ಕರ್ಮಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಶಾಂತ್ ಪಾಟೀಲ್, ವಿರೇಶ್ ಪಾಟೀಲ್, ರಾಮು ಪಾಟೀಲ್ ಎಂಬುವರನ್ನ ಬಂಧಿಸಲಾಗಿದೆ. ವೈಯುಕ್ತಿಕ ದ್ವೇಷಕ್ಕೆ ದಾಳಿ ನಡೆಸಿರೋ ಶಂಕೆ ಇದ್ದು, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ರಾಮನ ಹಾಡಿಗೆ ಡ್ಯಾನ್ಸ್ ಮಾಡಿದ್ದ ಯುವಕನ ಮೇಲೆ ಹಲ್ಲೆ – ಕೇಸ್ ದಾಖಲು..!
Post Views: 71