Download Our App

Follow us

Home » ಸಿನಿಮಾ » ಮಂಜು-ತ್ರಿವಿಕ್ರಮ್​ ಮಧ್ಯೆ ಮಾತಿನ ಜಟಾಪಟಿ.. ಟಾಸ್ಕ್ ಕೈ ಚೆಲ್ಲಿದ್ರಾ ಸ್ಪರ್ಧಿಗಳು?

ಮಂಜು-ತ್ರಿವಿಕ್ರಮ್​ ಮಧ್ಯೆ ಮಾತಿನ ಜಟಾಪಟಿ.. ಟಾಸ್ಕ್ ಕೈ ಚೆಲ್ಲಿದ್ರಾ ಸ್ಪರ್ಧಿಗಳು?

ಕನ್ನಡದ ಜನಪ್ರಿಯ ಶೋ ಬಿಗ್​ಬಾಸ್ ಸೀಸನ್​ 11​ ದಿನ ದಿನಕ್ಕೂ ರೋಚಕವಾಗಿ ಸಾಗುತ್ತಿದೆ. ಮನೆಯ ಸದಸ್ಯರಿಗೆ ಈ ವಾರದ ಕ್ಯಾಪ್ಟನ್​ ಭವ್ಯ ಹೊಸದೊಂದು ಟಾಸ್ಕ್ ಬಗ್ಗೆ ಹೇಳಿದ್ದಾರೆ. 9 ಸ್ಪರ್ಧಿಗಳಲ್ಲಿ 6 ಸದಸ್ಯರು ಟಾಸ್ಕ್ ಆಡಿ ಮನೆಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಪಡೆಯಬೇಕಿದೆ. ಇದರಲ್ಲಿ ಯಾರು ಯಶಸ್ವಯಾಗಿದ್ದಾರೆ ಎನ್ನುವುದು ಕೂತುಹಲ ಮೂಡಿಸಿದೆ.

ಟಾಸ್ಕ್​ ಕುರಿತು ಉಗ್ರಂ ಮಂಜು ಅವರು, ಚೈತ್ರಾ ಹಾಗೂ ಧನರಾಜ್​ಗೆ ಟಾಂಗ್ ಕೊಟ್ಟು ಸೆಟ್​ಬ್ಯಾಕ್ ಆಗುವಂತೆ ಹೇಳಿದ್ದರು. ಈ ವೇಳೆ ಗರಂ ಆದ ತ್ರಿವಿಕ್ರಮ್​ ನೀನಗೇನಣ್ಣ ಅಂತ ಪ್ರಶ್ನಿಸಿದ್ದಾರೆ. ದಿನಸಿಗಳಿಗೆ ನಿಮ್ಮಿಂದ ಪ್ರಾಬ್ಲಂ ಆದರೆ ನಾವೇನು ಮಾಡೋಣ ಎಂದು ಮಂಜುನಾ ಕೇಳಿದ್ದಾರೆ. ಸದ್ಯಕ್ಕಂತೂ ಮಂಜು ಹಾಗೂ ತ್ರಿವಿಕ್ರಮ್​ ಮಧ್ಯೆ ಮಾತಿನ ಜಟಾಪಟಿ ನಡೆದಿದೆ ಎನ್ನಬಹುದು. ಗೇಮ್​ನಲ್ಲಿ ಚೈತ್ರಾ ಜೊತೆ ಮಂಜು ಆಡುತ್ತಿದ್ದಾರೆ.

ಮನೆಯಲ್ಲಿ ಉಳಿದ 9 ಜನರಲ್ಲಿ 6 ಸದಸ್ಯರು ಈ ಗೇಮ್​ನಲ್ಲಿ ಪಾಲ್ಗೊಳ್ಳಬೇಕಿದೆ. ಇವರು ಉತ್ತಮವಾಗಿ ಆಡಿದರೆ ಮನೆಗೆ ದಿನಸಿ ಸಿಗುತ್ತವೆ. ಇಲ್ಲವಾದರೆ ಇಲ್ಲ. ನಾನು ಆಡಬಲ್ಲೇ ಎಂದು ಮುಂದೆ ಬಂದಿರುವ ಮಂಜು, ಎರಡೇರಡು ನಿಮಿಷಕ್ಕೊಂದು ಚೆಂಡು ಹಾಕ್ಕೊಂಡು ಬರ್ತಿನಿ ನೋಡು ಎಂದು ತ್ರಿವಿಕ್ರಮ್​ಗೆ ಚಾಲೆಂಜ್​ ಮಾಡಿದ್ದಾರೆ. ಆದರೆ ಗೇಮ್​ನಲ್ಲಿ ಚೈತ್ರಾ, ಮಂಜು ಇಬ್ಬರು ಅಷ್ಟೇನೂ ಚೆನ್ನಾಗಿ ಆಡಿಲ್ಲ ಎನ್ನುವುದು ಸದ್ಯದ ವಿಡಿಯೋದಿಂದ ಗೊತ್ತಾಗುತ್ತದೆ.

ಮಂಜು ಹಾಗೂ ಚೈತ್ರಾ ಗೇಮ್​ನಲ್ಲಿ ವಿಫಲವಾಗಿ ಆಡುತ್ತಿದ್ದಂತೆ ಉಳಿದ ಸ್ಪರ್ಧಿಗಳ ಮುಖದಲ್ಲಿ ಬೇಸರ ಕಾಣಿಸಿದೆ. ಟೇಬಲ್​ನಿಂದ ಬಾಲ್ ಕೆಳಗೆ ಬೀಳುತ್ತಿದ್ದಂತೆ ಮೋಕ್ಷಿತಾ, ಆಡುವವರ ಕಡೆ ಕೈ ಮಾಡಿ ಕೋಪಿಸಿಕೊಂಡಿದ್ದಾರೆ. ಅಯ್ಯೋ ಎನ್ನುವಂತೆ ಹನುಮಂತನ ಮುಖದ ಭಾವ ಇತ್ತು. ಇನ್ನು ಕುಳಿತುಕೊಂಡು ಇದನ್ನೆಲ್ಲ ತ್ರಿವಿಕ್ರಮ್, ಭವ್ಯ ನೋಡುತ್ತಲಿದ್ದರು. ಚೆಂಡು ಕಳೆಗೆ ಬಿದ್ದಿದ್ದಕ್ಕೆ ಮಂಜು ತನ್ನ ಹಣೆಗೆ ಕೈಯಿಂದ ಹೊಡೆದುಕೊಂಡಿದ್ದಾರೆ.

ಇದನ್ನೂ ಓದಿ : KAS ಸೇರಿ ವಿವಿಧ ಎಕ್ಸಾಮ್​ಗಳಲ್ಲಿ ಪಾಸ್ ಮಾಡಿಸೋದಾಗಿ ಲಕ್ಷ-ಲಕ್ಷ ವಂಚನೆ.. ಟಿಕೆಟ್ ಇನ್ಸ್‌ಪೆಕ್ಟರ್‌ ಬಂಧನ..!

Leave a Comment

DG Ad

RELATED LATEST NEWS

Top Headlines

ಕರ್ನಾಟಕದಲ್ಲಿಂದು ಐತಿಹಾಸಿಕ ಬೆಳವಣಿಗೆ – ಮುಂಡಗಾರು ಲತಾ ಸೇರಿ 6 ನಕ್ಸಲರು ಶರಣಾಗತಿ.. ಪ್ರಕ್ರಿಯೆ ಹೇಗಿರಲಿದೆ?

ಚಿಕ್ಕಮಗಳೂರು : ಇಂದು (ಜ.08) ಕರ್ನಾಟಕದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡು ಮೂಲದ 6 ಮೋಸ್ಟ್‌ ವಾಂಟೆಡ್‌ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ

Live Cricket

Add Your Heading Text Here