Download Our App

Follow us

Home » ಸಿನಿಮಾ » ರಾಜ್ಯದ ಪ್ರತಿ ಗೃಹಿಣಿಯರನ್ನು ಸಂಭ್ರಮಿಸೋಕೆ ಬಹುಮಾನಗಳನ್ನು ಹೊತ್ತು ಬರ್ತಿದೆ “ಸುವರ್ಣ ಗೃಹಮಂತ್ರಿ” ರಿಯಾಲಿಟಿ ಶೋ..!

ರಾಜ್ಯದ ಪ್ರತಿ ಗೃಹಿಣಿಯರನ್ನು ಸಂಭ್ರಮಿಸೋಕೆ ಬಹುಮಾನಗಳನ್ನು ಹೊತ್ತು ಬರ್ತಿದೆ “ಸುವರ್ಣ ಗೃಹಮಂತ್ರಿ” ರಿಯಾಲಿಟಿ ಶೋ..!

ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು ಇನ್ನಷ್ಟು ದುಪ್ಪಟ್ಟುಗೊಳಿಸಲು “ಸುವರ್ಣ ಗೃಹಮಂತ್ರಿ” ಎಂಬ ಹೊಸದೊಂದು ರಿಯಾಲಿಟಿ ಶೋ ಅನ್ನು ಪ್ರಸಾರ ಮಾಡಲು ಸಜ್ಜಾಗಿದೆ.

ಇದೊಂದು ವಿಭಿನ್ನ ರೀತಿಯ ರಿಯಾಲಿಟಿ ಶೋ. ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು/ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು ‘ಥ್ಯಾಂಕ್ ಯು’ ಅಂತನೂ ಯಾರೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಸೀರೆ, ಚಿನ್ನ, ಬೆಳ್ಳಿ ಹಾಗೂ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ “ಸುವರ್ಣ ಗೃಹಮಂತ್ರಿ” ಕಾರ್ಯಕ್ರಮದ ಶೈಲಿಯಾಗಿದೆ.

ಇನ್ನು ಇದೇ ಮೊದಲ ಬಾರಿಗೆ ಜನಪ್ರಿಯ ನಿರೂಪಕ ಮುರಳಿ ಸ್ಟಾರ್ ಸುವರ್ಣ ವಾಹಿನಿಗೆ ಲಗ್ಗೆಯಿಟ್ಟಿದ್ದು, ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ಸಾರಥಿಯಾಗಿ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಮುರಳಿಯವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆ, ಬೆಳ್ಳಿ-ಬಂಗಾರ ಕೊಟ್ಟು ಮನೆ ಗೃಹಿಣಿಯನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ.

ಸದ್ಯ ‘ಸುವರ್ಣ ಗೃಹಮಂತ್ರಿ’ಯ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದ್ದು, ನೋಡುಗರು ಈ ಕಾರ್ಯಕ್ರಮವನ್ನು ನೋಡಲು ಕಾತುರತೆಯಿಂದ ಕಾಯುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಹುಮಾನಗಳ ಮಹಾ ಮಳೆಯೇ ಸುರಿಯಲಿದ್ದು ಪ್ರೇಕ್ಷಕರಿಗೆ ಮನರಂಜನೆ ಸಿಗೋದಂತೂ ಖಚಿತ.

ಕರುನಾಡಿನ ಗೃಹಿಣಿಯರನ್ನು ಸಂಭ್ರಮಿಸೋದಕ್ಕೆ ರಾಣಿ ಸೀಟಿನೊಂದಿಗೆ ನಿಮ್ಮನೆಗೆ ಬರ್ತಿದೆ ಹೊಸ ಶೋ ‘ಸುವರ್ಣ ಗೃಹಮಂತ್ರಿ’ ಇದೇ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.

ಇದನ್ನೂ ಓದಿ : ರಾಜ್ಯವನ್ನೇ ಬೆಚ್ಚಿಬೀಳಿಸೋ ರಾಕ್ಷಸ ಕೃತ್ಯ – ಕೊಡಗಿನಲ್ಲಿ SSLC ವಿದ್ಯಾರ್ಥಿನಿಯ ತಲೆ ಕತ್ತರಿಸಿ ಬರ್ಬರ ಹ*ತ್ಯೆ..!

Leave a Comment

DG Ad

RELATED LATEST NEWS

Top Headlines

ನನ್ನ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ – ಮನಮೋಹನ್‌ ಸಿಂಗ್‌ ನಿಧನಕ್ಕೆ ಕಂಬನಿ ಮಿಡಿದ ರಾಗಾ..

ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಕಂಬನಿ ಮಿಡಿದಿದ್ದಾರೆ. ನನ್ನ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ ಎಂದು ನೋವಿನಿಂದ ನುಡಿದಿದ್ದಾರೆ.

Live Cricket

Add Your Heading Text Here