ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಸದನದ ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಎಂ.ಪಿ ನರೇಂದ್ರ ಸ್ವಾಮಿ ಅವರು ಶಾಸಕ ಮುನಿರತ್ನ ಅವರ ಜಾತಿ ನಿಂದನೆ ಪ್ರಕರಣವನ್ನು ಎಳೆದು ತಂದಿದ್ದಾರೆ. ಮಾತ್ರವಲ್ಲ ಸದನದಿಂದ ಶಾಸಕ ಮುನಿರತ್ನ ಅವರನ್ನು ಸಸ್ಪೆಂಡ್ ಮಾಡುವಂತೆ ಸ್ಪೀಕರ್ಗೆ ಆಗ್ರಹಿಸಿದ್ದಾರೆ.
ಹೌದು, ಸದನದ ಚರ್ಚೆಯ ಸಂದರ್ಭದಲ್ಲಿ ಮಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಅವರು ಶಾಸಕ ಮುನಿರತ್ನ ಅವರ ಜಾತಿ ನಿಂದನೆ ಪ್ರಕರಣವನ್ನು ಎಳೆದು ತಂದಾಗ ಆಡಳಿತ ಹಾಗೂ ವಿಪಕ್ಷ ನಾಯಕರ ನಡುವೆ ಬಾರೀ ಚರ್ಚೆಗೆ ಕಾರಣವಾಯಿತು. ಶಾಸಕ ಮುನಿರತ್ನ ಸದನದಲ್ಲಿ ಇರುವಾಗಲೇ ಗದ್ದಲ ಉಂಟಾಗಿದ್ದು, ‘ಒಬ್ಬ ಶಾಸಕರು ಕಂಟ್ರಾಕ್ಟರ್ ಜೊತೆ ಮಾತಾಡಿದ್ದಾರೆ. ಅದರಲ್ಲಿ ಹೆಣ್ಣಿನ ಬಗ್ಗೆ ಒಕ್ಕಲಿಗರು, ಮತ್ತೆ ದಲಿತರ ಜಾತಿ ನಿಂದನೆ ಮಾಡಿದ್ದಾರೆ. ಅವರನ್ನು ಸಸ್ಪೆಂಡ್ ಮಾಡಬೇಕೆಂದು’ ಶಾಸಕ ನರೇಂದ್ರ ಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಇವಾಗ ಎಫ್ಎಸ್ ಎಲ್ ರಿಪೋರ್ಟ್ ನಲ್ಲೂ ಅವರದ್ದೇ ಧ್ವನಿ ಎಂದು ಸಾಬೀತಾಗಿದೆ. ಹೀನ ಕೃತ್ಯ ಎಸಗಿರೋ ಶಾಸಕರು ಸದನದಲ್ಲಿ ಇರೋದು ಸರಿಯಲ್ಲ, ಯಾರನ್ನೋ ಓಲೈಸಲು ಅಥವಾ ವ್ಯೆಯಕ್ತಿಕ ದ್ವೇಷಕ್ಕೆ ಹೇಳುತ್ತಿಲ್ಲ. ಜಾತಿಯವನಾಗಿ ಈ ಮಾತು ಹೇಳ್ತಿದ್ದೇನೆ ಆ ಶಾಸಕರನ್ನು ಸಸ್ಪೆಂಡ್ ಮಾಡಲೇಬೇಕು. ಕೋರ್ಟ್ನಲ್ಲಿ ಅವರು ನಿರ್ದೋಷಿ ಅಂತಾ ಆದೇಶ ಬರಲಿ. ಅಲ್ಲಿಯವರೆಗೂ ಸದನದಿಂದ ಅವರನ್ನು ಹೊರಗಿಡಿ ಎಂದು ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಆಗ್ರಹಿಸಿದ್ದಾರೆ.
ಈ ವೇಳೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೋರ್ಟ್ನಲ್ಲಿರುವ ಪ್ರಕರಣ ಚರ್ಚೆ ಬೇಡ ಎಂದು ಸಲಹೆ ನೀಡಿದ್ದಾರೆ. ಕೆಲಹೊತ್ತು ಆಡಳಿತ-ವಿಪಕ್ಷ ಸದಸ್ಯರ ನಡುವೆ ಕೋಲಾಹಲಕ್ಕೆ ಕಾರಣವಾಯಿತು.
ಇದನ್ನೂ ಓದಿ : ಜಾರ್ಜಿಯಾದ ರೆಸ್ಟೋರೆಂಟ್‌ನಲ್ಲಿ 11 ಭಾರತೀಯರು ಶವವಾಗಿ ಪತ್ತೆ – ಆಗಿದ್ದೇನು?