ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಅವರ ಜಾಮೀನಿಗಾಗಿ ಹಲವು ದಿನಗಳಿಂದ ಕಾನೂನು ಹೋರಾಟ ನಡೆಯುತ್ತಿತ್ತು. ಆರೋಗ್ಯ ತಪಾಸಣೆ, ಚಿಕಿತ್ಸೆ ಹಿನ್ನೆಲೆ ಹೈಕೋರ್ಟ್ ಆರು ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನನ್ನು ಅಕ್ಟೋಬರ್ 30ರಂದು ಮಂಜೂರು ಮಾಡಿದೆ.
ಜಾಮೀನು ಮೂಲಕ ಹೊರ ಬಂದಿರುವ ದರ್ಶನ್ ಕಳೆದ 6 ದಿನಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈಗಾಗಲೇ ನಟ ದರ್ಶನ್ಗೆ ವೈದ್ಯರು ಎಕ್ಸ್-ರೇ, MRI ಸ್ಕ್ಯಾನಿಂಗ್, ಸಿಟಿ ಸ್ಕ್ಯಾನ್ ಮಾಡಿದ್ದಾರೆ. ಟೆಸ್ಟಿಂಗ್ ವೇಳೆ ನಟ ದರ್ಶನ್ಗೆ ಬೆನ್ನು ನೋವು ಸಮಸ್ಯೆ ಪತ್ತೆಯಾಗಿದೆ. ಹೀಗಾಗಿ ಸರ್ಜರಿ ಮಾಡೋದು ಸೂಕ್ತ ಎಂದು ವೈದ್ಯರು ತಿಳಿಸಿದ್ದಾರೆ. ಒಂದೆರಡು ದಿನಗಳಲ್ಲಿ ನಟ ದರ್ಶನ್ಗೆ ಸರ್ಜರಿ ಮಾಡುವ ಸಾಧ್ಯತೆಯಿದೆ.
ಸರ್ಜರಿ ಮಾಡಲು ಮುಂದಾಗಿರುವ BGS ವೈದ್ಯರ ತಂಡ, ಈಗಾಗಲೇ ಮನೆಯವರ ಜೊತೆ ಮಾತುಕಥೆ ನಡೆಸಿದ್ದು, ದರ್ಶನ್ ಸರ್ಜರಿಗೆ ಪತ್ನಿ ವಿಜಯಲಕ್ಷ್ಮಿ ಅವರು ಸಮ್ಮತಿ ನೀಡಿದ್ದಾರೆ. ಹೀಗಾಗಿ ಕುಟುಂಬದವರ ಅನುಮತಿಯಂತೆ ವೈದ್ಯರು ಸರ್ಜರಿ ಮಾಡಲಿದ್ದಾರೆ.
ಇದನ್ನೂ ಓದಿ : ಮುಡಾ ಕೇಸ್ – ಸಿಎಂಗೆ ಮತ್ತೊಂದು ನೋಟಿಸ್ ಕೊಟ್ಟ ಲೋಕಾ SP ಉದೇಶ್..!