ಚಿತ್ರದುರ್ಗ : ಅಡಿಕೆ ವ್ಯಾಪಾರಿಯೊರ್ವ ಚಿತ್ರದುರ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿತ್ತು. ಇದೀಗ ಸೂಸೈಡ್ ಕೇಸ್ಗೆ ಟ್ವಿಸ್ಟ್ ಸಿಕ್ಕದ್ದು, ಡೆತ್ ನೋಟ್ನಲ್ಲಿ ಸ್ಫೋಟಕ ರಹಸ್ಯವೊಂದು ಬಯಲಾಗಿದೆ.
ಅಡಿಕೆ ವ್ಯಾಪಾರಿ ಶೈಲೇಶ್ನಿಂದ ವರ್ತಕ ಉದಯ್ ಶೆಟ್ಟಿ 6 ಕೋಟಿ 60 ಲಕ್ಷ ಮೌಲ್ಯದ ಅಡಿಕೆ ಖರೀದಿಸಿದ್ದರು. ಇದೀಗ ಡೆತ್ನೋಟ್ನಲ್ಲಿ ಶೆಟ್ಟಿ 6 ಕೋಟಿ 60 ಲಕ್ಷ ವಂಚಿಸಿದ್ದಾನೆಂದು ಎಂಬುದು ಉಲ್ಲೇಖವಾಗಿದೆ. ಹೀಗಾಗಿ ಅಡಿಕೆ ವ್ಯಾಪಾರಿ ಆತ್ಮಹತ್ಯೆಗೆ ಅಡಿಕೆ ವರ್ತಕನ ಕೋಟಿ ಕೋಟಿ ವಂಚನೆ ಕಾರಣ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಅಡಿಕೆ ವ್ಯಾಪಾರಿ ಶೈಲೇಶ್ ಹಣ ಕೇಳಿದ್ದಕ್ಕೆ ವರ್ತಕ ಉದಯ್ ಶೆಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಂತೆ. ನನ್ನ ಸಾವಿಗೆ ಅಡಿಕೆ ವರ್ತಕ ಉದಯ್ ಶೆಟ್ಟಿ ಕಾರಣ ಎಂದು ಡೆತ್ನೋಟ್ ಬರೆದಿಟ್ಟು, ತಂದೆಯ ಬಳಿ ಕ್ಷಮೆಯಾಚಿಸಿ ಶೈಲೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ : ಕಿರುಕುಳ ಆರೋಪ – ಬಸವನಗುಡಿ PSI ವಿರುದ್ಧ ಕಮಿಷನರ್ಗೆ ಮಾಜಿ ಪ್ರಿಯತಮೆ ದೂರು..!