ಗದಗ : ಬಿರು ಬಿಸಿಲಿನ ತಾಪಕ್ಕೆ ಕಂಗೆಟ್ಟು ಹೋಗಿರುವ ಜನರು ಮನೆಯಿಂದ ಹೊರ ಬರಲು ಹಿಂದು-ಮುಂದು ನೋಡುತ್ತಿದ್ದಾರೆ. ಬಿಸಿಲಿನ ಬೇಗೆಗೆ ಇದೀಗ ಹಲವೆಡೆ ನೀರಿನ ಜಲಾಶಯ ಕೂಡ ಬತ್ತಿ ಹೋಗಿ ಜನರಿಂದ ಹಿಡಿದು ಮೂಕ ಪ್ರಾಣಿಯವರೆಗೂ ಒಂದು ಹನಿ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಹಿಗಿರುವಾಗಲೇ, ಗದಗ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರಿನ ಅಭಾವ ಉಂಟಾಗಿದೆ. ಈ ಹಿನ್ನಲೆ ಗದಗ ಜಿಲ್ಲೆಯ ಬೆಟಗೇರಿಯ ಕರ್ನಲ್ ಪೇಟೆಯಗೆ ನಗರಸಭೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್ ನೀರು ನಗರಕ್ಕೆ ಬರ್ತಿದ್ದಂತೆ ಮಹಿಳೆಯರು ನೀರಿಗಾಗಿ ಮುಗಿಬಿದಿದ್ದಾರೆ.
ಈ ವೇಳೆ ನೀರಿಗಾಗಿ ಮುಗಿಬಿದ್ದ ಮಹಿಳೆಯರು ರೋಡ್ನಲ್ಲೇ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಒಂದೇ ಕುಟುಂಬದ ಮೂವರು ಮಹಿಳೆಯರು ವೃದ್ಧೆಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಇದನ್ನೂ ಓದಿ : ಯುಗಾದಿ ಹಬ್ಬಕ್ಕೆ ಡಾಲಿ ಅಭಿಮಾನಿಗಳಿಗೆ ಗಿಫ್ಟ್ : “ಕೋಟಿ” ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್..!
Post Views: 208