ದೆಹಲಿ : ಇಂದು ಮುಂಜಾನೆ ನೇಪಾಳದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.1ರಷ್ಟು ದಾಖಲಾಗಿದೆ. ಭಾರತದ ಹಲವು ರಾಜ್ಯಗಳಲ್ಲೂ ಭೂಕಂಪನದ ಅನುಭವವಾಗಿದ್ದು, ಬಿಹಾರ, ದೆಹಲಿ, ಪಂಜಾಬ್, ಅಸ್ಸಾಂ, ಸಿಕ್ಕಿಂ ಸೇರಿ ಪಶ್ಚಿಮ ಬಂಗಾಳ, ಉತ್ತರ ಭಾರತದ ಹಲವೆಡೆ ಭೂಮಿ ಕಂಪಿಸಿದೆ. ಈ ಮೂಲಕ ವರ್ಷದ ಮೊದಲ ಭೂಕಂಪಕ್ಕೆ ಭಾರತ ಬೆಚ್ಚಿಬಿದ್ದಿದೆ.
ಇಂದು ಮುಂಜಾನೆ 6.40ರ ಸುಮಾರಿಗೆ ಭೂಮಿ ಕಂಪಸಿದ್ದು, ನಿದ್ರೆಯಲ್ಲಿದ್ದವರೆಲ್ಲ ಭೂಮಿ ನಡುಗುತ್ತಿದ್ದಂತೆ ಮನೆಯಿಂದ ಹೊರ ಓಡಿ ಬಂದಿದ್ದಾರೆ. ನೇಪಾಳ ಲ್ಯಾಬೋಚೆ ಬಳಿ ಭೂಕಂಪನದ ಕೇಂದ್ರ ಬಿಂದುವಾಗಿದ್ದು, 7.1 ರಷ್ಟು ತೀವ್ರತೆ ದಾಖಲಾಗಿದೆ. ಚೀನಾದ ಕ್ಸಿನ್ಸಿಯಾಗ್ ಪ್ರದೇಶದಲ್ಲಿಯೂ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ದಾಖಲಾಗಿದೆ.
ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ…
ಇದನ್ನೂ ಓದಿ : ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಿದ ದೊಡ್ಮನೆ ಆಟ.. ಉಗ್ರಂ ಮಂಜು-ರಜತ್ ನಡುವೆ ಮತ್ತೆ ಕಿರಿಕ್..!
Post Views: 144