ಮಂಡ್ಯ : ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಲ್ಲು ಕಳ್ಳರ ಹಾವಳಿ ಹೆಚ್ಚಾಗಿದ್ದು, ಮರಳು ಮತ್ತು ಕಲ್ಲು ಕಳ್ಳರಿಂದ ಶ್ರೀರಂಗಪಟ್ಟಣದ ಕಾವೇರಿ ನದಿ ಸೇತುವೆಗೆ ರಕ್ಷಣೆ ಇಲ್ಲದಂತಾಗಿದೆ. ಕಳ್ಳರು ಸೇತುವೆ ಕೆಳಗಿನ ಪಿಲ್ಲರ್ ರಕ್ಷಣೆಗೆ ಹಾಕಲಾಗಿದ್ದ ಕಲ್ಲುಗಳನ್ನು ರಾಜಾರೋಷವಾಗಿ ಹೊತ್ತೊಯ್ದಿದ್ದಾರೆ.
ನದಿ ನೀರಿನ ರಭಸ ತಡೆಯಲು ಪಿಲ್ಲರ್ ರಕ್ಷಣೆಗಾಗಿ ಹಾಕಿದ್ದ ಕಲ್ಲುಗಳನ್ನು ಕಳ್ಳರು ಹಾರೆಯಿಂದ ಎಬ್ಬಸಿ, ಟ್ರ್ಯಾಕ್ಟರ್ಗಳ ಮೂಲಕ ಬೇರೆಡೆ ಸಾಗಾಟ ಮಾಡುತ್ತಿದ್ದಾರೆ. ಇನ್ನು ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರೋ ಈ ಸೇತುವೆ ಕೆಳಗೆ ಬೃಹತ್ ಬಂಡೆಗಳನ್ನ ಡೈನಮೆಟ್ ಇಟ್ಟು ಸಿಡಿಸಲು ಸಿದ್ದತೆ ಕೂಡ ಮಾಡಿಕೊಂಡಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಠಾಣಾ ವ್ಯಾಪ್ತಿಯಲ್ಲಿ ಇಷ್ಟೆಲ್ಲ ಅಕ್ರಮ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದರು ಪೊಲೀಸರು ಸೈಲೆಂಟ್ ಆಗಿದ್ದು, ಸದ್ಯ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ‘ವಿದ್ಯಾಪತಿ’ ಚಿತ್ರದ ಮೊದಲ ಹಾಡು ರಿಲೀಸ್.. ಕರಾಟೆ ತರಗತಿಯಲ್ಲಿ ನಾಗಭೂಷಣನ ನಾನಾ ಕಿತಾಪತಿ..!