Download Our App

Follow us

Home » ರಾಜಕೀಯ » ಒಂದೇ ವಿಮಾನದಲ್ಲಿ ಡಿಕೆಶಿ ಜೊತೆ ಎಸ್‌.ಟಿ ಸೋಮಶೇಖರ್‌ ಪ್ರಯಾಣ..!

ಒಂದೇ ವಿಮಾನದಲ್ಲಿ ಡಿಕೆಶಿ ಜೊತೆ ಎಸ್‌.ಟಿ ಸೋಮಶೇಖರ್‌ ಪ್ರಯಾಣ..!

ಬೆಂಗಳೂರು : ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಇಬ್ಬರೂ ಒಂದೇ ಫೈಟ್‌ನಲ್ಲಿ ಪ್ರಯಾಣಿಸಿದ್ದಾರೆ. ಸೋಮಶೇಖರ್ ಪದೇ-ಪದೇ ಡಿಕೆಶಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಎಸ್​ಟಿಎಸ್ ಕಾಂಗ್ರೆಸ್​ ಕಡೆ​ ಮುಖ ಮಾಡೋದು ಪಕ್ಕಾನಾ..? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಎಸ್‌.ಟಿ.ಸೋಮಶೇಖರ್‌ ಒಂದೇ ವಿಮಾನದಲ್ಲಿ ಡಿಕೆಶಿ ಜೊತೆ ಮಂಗಳೂರಿಗೆ ಹೋಗಿದ್ದರು. ಇಬ್ಬರು ನಾಯಕರು ಕರ್ಣಾಟಕ ಬ್ಯಾಂಕ್​​ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಸೋಮಶೇಖರ್‌ ಹಲವು ಕಾರ್ಯಕ್ರಮಗಳಲ್ಲಿ ಡಿಕೆಶಿ ಜೊತೆ ಕಾಣಿಸಿಕೊಂಡಿದ್ದಾರೆ.

ಬಿಜೆಪಿಯಲ್ಲಿ ಇದ್ದರೂ ಕಾಂಗ್ರೆಸ್​ ಕಡೆ ಮುಖ ಮಾಡಿರುವ ಎಸ್​​ಟಿ ಸೋಮಶೇಖರ್ ಅವರು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ಮಾತನಾಡಿದ್ದಾರೆ. ನಿನ್ನೆ ಆರ್​​.ಆರ್​​​.ನಗರದ ಕಾರ್ಯಕ್ರಮದಲ್ಲೂ ಸೋಮಶೇಖರ್‌ ಡಿಕೆಶಿಯನ್ನು ಹೊಗಳಿದ್ದಾರೆ. ಹಾಗೆಯೇ, ಸಿಎಂ ಸಿದ್ದರಾಮಯ್ಯನವರು ಮಂಡಿಸಿದ 15ನೇ ರಾಜ್ಯ ಬಜೆಟ್​ ಅನ್ನು ಎಸ್.ಟಿ ಸೋಮಶೇಖರ್ ಹಾಡಿ ಹೊಗಳಿದ್ದರು.

ಇದನ್ನೂ ಓದಿ : ಪರೀಕ್ಷೆ ವೇಳೆ ನಿದ್ರೆ ಕಂಟ್ರೋಲ್​​ಗೆ ಉಗ್ರರು ನುಂಗುವ ಮಾತ್ರೆ ಸೇವಿಸುತ್ತಿರುವ ವಿದ್ಯಾರ್ಥಿಗಳು..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here