ಶೃಂಗೇರಿ: ವಿಶ್ವದ ಅತೀ ದೊಡ್ಡ ಧಾರ್ಮಿಕ ಹಬ್ಬ ಬರೋಬ್ಬರಿ 144 ವರ್ಷಗಳಿಗೆ ಒಮ್ಮೆ ನಡೆಯುವ ಐತಿಹಾಸಿಕ ಮಹಾ ಕುಂಭಮೇಳದಲ್ಲಿ ವಿಶ್ವದ ಮೂಲೆ ಮೂಲೆಯಿಂದ ಭಕ್ತ ಸಾಗರವೇ ಹರಿದು ಬರ್ತಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿರುವ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೋಟಿ ಕೋಟಿ ಭಕ್ತರು ಪವಿತ್ರ ಸ್ನಾನ ಮಾಡುವುದರ ಮೂಲಕ ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ಇದೀಗ ಮಹಾ ಕುಂಭಮೇಳಕ್ಕೆ ಕರ್ನಾಟಕದ ಶೃಂಗೇರಿಯ ಜಗದ್ಗುರು ಶ್ರೀ ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪಿಠದ ಜಗದ್ಗುರುಗಳಾದ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಭೇಟಿ ನೀಡಲಿದ್ದಾರೆ.
ಐತಿಹಾಸಿಕ ಮಹಾ ಕುಂಭಮೇಳಕ್ಕೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಶ್ರೀಗಳು ತೆರಳುತ್ತಿರುವುದು ಮಾತ್ರವಲ್ಲದೇ ಪ್ರಯಾಗ ರಾಜ್ನಲ್ಲಿಯೇ ಹತ್ತು ದಿನಗಳ ಕಾಲ ವಾಸ್ತವ್ಯ ಇರಲಿದ್ದಾರೆ. ಜೊತೆಗೆ ಕಾಶಿಯಲ್ಲಿಯೂ 10 ದಿನ ತಂಗಲಿದ್ದು, ಅಲ್ಲಿ ಅನ್ನಪೂರ್ಣೇಶ್ವರಿ ದೇಗುಲದ ಪುನರ್ ಪ್ರತಿಷ್ಠಾಪನೆಯನ್ನು ಸಹ ವಿಧುಶೇಖರಭಾರತೀ ಶ್ರೀಗಳು ಮಾಡಲಿದ್ದಾರೆ.
ಕಾಶಿಯ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ಬಳಿಕ ಅಲ್ಲಿಂದ ಅಯೋಧ್ಯೆಗೆ ತೆರಳಿ ರಾಮಮಂದಿರದಲ್ಲಿ ಪ್ರಭು ಶ್ರೀರಾಮನಿಗೆ ಪೂಜೆ ಸಲ್ಲಿಸಿ ಅಲ್ಲಿಯೂ ಒಂದು ದಿನ ಉಳಿದು, ಅಂತಿಮವಾಗಿ ಯೋಗಿ ಆದಿತ್ಯನಾಥರ ಗೋರಖಪುರದಲ್ಲಿಯೂ ಒಂದು ದಿನ ತಂಗಲಿದ್ದಾರೆ.
ಈ ಸಂಬಂಧ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿಗಳಾದ ಶ್ರೀಯುತ ಮುರುಳಿ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಎಲ್ಲಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಶೃಂಗೃರಿ ಮಠದ ಸಿ.ಓ ಮುರುಳಿ ಅವರು ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಮಹಾಕುಂಭ ಮೇಳ ನಡೆಯುವ ಜಾಗವನ್ನೇ 76ನೇ ಜಿಲ್ಲೆಯಾಗಿ ಘೋಷಣೆ ಮಾಡಿದೆ. ಕೇವಲ 2 ದಿನಗಳಲ್ಲೇ 6 ಕೋಟಿ ಭಕ್ತರು ಕುಂಭಮೇಳಕ್ಕೆ ಭೇಟಿ ನೀಡಿದ್ದು ಅಮೃತಸ್ನಾನ ಮಾಡ್ತಿದ್ದಾರೆ.
ಇದನ್ನೂ ಓದಿ : ಜಾತಿ ಗಣತಿ ವಿಚಾರದಲ್ಲಿ ಸಿದ್ದು ಸರ್ಕಾರ ಯೂ-ಟರ್ನ್ – ಇಂದಿನ ಕ್ಯಾಬಿನೆಟ್ನಲ್ಲಿ ವರದಿ ಮಂಡನೆ ಆಗಲ್ಲ.. ಸಿಎಂ ಸ್ಪಷ್ಟನೆ!
Post Views: 48