Download Our App

Follow us

Home » ಸಿನಿಮಾ » ‘ರಾಬಿನ್‌ಹುಡ್‌’ಗೆ ಶ್ರೀಲೀಲಾ ಲೇಡಿಬಾಸ್ – ಮತ್ತೆ ಒಂದಾಯ್ತು ‘ಎಕ್ಸ್-ಅರ್ಡಿನರಿ ಮ್ಯಾನ್’ ಜೋಡಿ..!

‘ರಾಬಿನ್‌ಹುಡ್‌’ಗೆ ಶ್ರೀಲೀಲಾ ಲೇಡಿಬಾಸ್ – ಮತ್ತೆ ಒಂದಾಯ್ತು ‘ಎಕ್ಸ್-ಅರ್ಡಿನರಿ ಮ್ಯಾನ್’ ಜೋಡಿ..!

ತೆಲುಗಿನ ಯುವ ನಟ ನಿತಿನ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ರಾಬಿನ್ ಹುಡ್’ಗೆ ನಾಯಕಿ ಸಿಕ್ಕಿದ್ದಾರೆ.ಎಕ್ಸ್ ಅರ್ಡಿನರಿ ಮ್ಯಾನ್ ಚಿತ್ರದ ಮೂಲಕ ಮೋಡಿ ಮಾಡಿದ್ದ ನಿತಿನ್ ಹಾಗೂ ಶ್ರೀಲೀಲಾ ಮತ್ತೆ ಒಂದಾಗಿದ್ದಾರೆ. ಧಮಾಕ ಬ್ಯೂಟಿ ನಾಯಕಿಯಾಗಿ ರಾಬಿನ್ ಹುಡ್ ನಲ್ಲಿ ನಟಿಸುತ್ತಿದ್ದಾರೆ. ಇಂದು ಶ್ರೀಲೀಲಾ ಹುಟ್ಟುಹಬ್ಬ. ಅವರ ಹುಟ್ಟುಹಬ್ಬ ಸ್ಪೆಷಲ್ ಆಗಿ ಚಿತ್ರತಂಡ ಸಣ್ಣ ವಿಡಿಯೋ ಮೂಲಕ ಅವರನ್ನು ರಾಬಿನ್ ಹುಡ್ ಬಳಗಕ್ಕೆ ಸ್ವಾಗತಿಸಲಾಗಿದೆ.

ನಿತಿನ್-ಶ್ರೀಲೀಲಾ ಜೋಡಿಯಾಗಿ ನಟಿಸುತ್ತಿರುವ ಚಿತ್ರದಲ್ಲಿ ನಟ ಕಿರೀಟಿ ರಾಜೇಂದ್ರ ಪ್ರಸಾದ್ ಮತ್ತು ವೆನ್ನೆಲ ಕಿಶೋರ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ರಾಬಿನ್ ಹುಡ್ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದೆ. ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದು, ಪ್ರವೀಣ್ ಪುಡಿ ಸಂಕಲನ ಮತ್ತು ರಾಮ್ ಕುಮಾರ್ ಕಲಾ ನಿರ್ದೇಶನವಿದೆ.

ಭೀಷ್ಮ, ಎಕ್ಸ್ ಅರ್ಡಿನರಿ ಮ್ಯಾನ್ ನಂತಹ ಚಿತ್ರಗಳನ್ನು ನಿರ್ದೇಶಿಸಿದ್ದ ವೆಂಕಿ ಕುಡುಮುಲ ರಾಬಿನ್ ಹುಡ್ ಗೆ ಸೂತ್ರಧಾರಿ. ಆಕ್ಷನ್ ಜೊತೆಗೆ ಕಾಮಿಡಿ ಕಥಾಹಂದರ ಹೊಂದಿರುವ ಸಿನಿಮಾ ಡಿಸೆಂಬರ್ 20 ರಂದು ಕ್ರಿಸ್‌ಮಸ್‌ ಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here