Download Our App

Follow us

Home » ಸಿನಿಮಾ » ಯುವ ರಾಜ್​​​ಕುಮಾರ್​​ಗೆ ಡಿವೋರ್ಸ್ ಕೊಡಲ್ಲ ಅಂತ ಪಟ್ಟು ಹಿಡೀತಾರಾ ಶ್ರೀದೇವಿ? ದೊಡ್ಮನೆ ಸೊಸೆ ಹೇಳಿದ್ದೇನು ಗೊತ್ತಾ?

ಯುವ ರಾಜ್​​​ಕುಮಾರ್​​ಗೆ ಡಿವೋರ್ಸ್ ಕೊಡಲ್ಲ ಅಂತ ಪಟ್ಟು ಹಿಡೀತಾರಾ ಶ್ರೀದೇವಿ? ದೊಡ್ಮನೆ ಸೊಸೆ ಹೇಳಿದ್ದೇನು ಗೊತ್ತಾ?

ಡಾ. ರಾಜ್‌ ಕುಮಾರ್‌ ಕುಟುಂಬದ ಕುಡಿ, ದೊಡ್ಮನೆ ಹುಡುಗ ಯುವ ರಾಜ್​​ಕುಮಾರ್‌ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ. ಯುವ ರಾಜ್​ಕುಮಾರ್​​ ಪತ್ನಿಯಿಂದ ದೂರವಾಗಲು ನಿರ್ಧರಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇಬ್ಬರು ವಿಚ್ಛೇದನ ಪಡೆಯೋದು ಎರಡೂ ಫ್ಯಾಮಿಲಿಗೂ ಒಪ್ಪಿಗೆಯಿಲ್ಲ ಎಂದು ಹೇಳಲಾಗುತ್ತಿದೆ.

ಈಗಾಗಲೇ ಯುವರಾಜ್​​​ ಕುಮಾರ್​​ ಡಿವೋರ್ಸ್ ವಿಚಾರಕ್ಕೆ ಬಿಟಿವಿಗೆ ಮೊದಲ ರಿಯಾಕ್ಷನ್ ನೀಡಿದ ​​​ದೊಡ್ಮನೆ ಸೊಸೆ ಶ್ರೀದೇವಿ ಅವರು, ಲೀಗಲ್ ನೋಟಿಸ್​ಗೆ ನಾನು ಈಗಾಗಲೇ ಉತ್ತರಿಸಿದ್ದೇನೆ. ವಿಚ್ಛೇದನದ ಅರ್ಜಿ ಇನ್ನೂ ನನಗೆ ತಲುಪಿಲ್ಲ. ಅರ್ಜಿ ಬಂದ ಬಳಿಕ ನಾನು ಕೋರ್ಟ್​ಗೆ ಉತ್ತರಿಸುವುದಾಗಿ ಹೇಳಿದ್ದಾರೆ. ಎಲ್ಲಾ ವಿಚಾರಗಳು ಚಿತ್ರರಂಗ ಹಾಗೂ ಮಾಧ್ಯಮಕ್ಕೆ ತಿಳಿದೆ ಎಂದಿದ್ದಾರೆ.

ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಮಾನಸಿಕ ಪರಿಸ್ಥಿತಿಯಲ್ಲಿ ಇಲ್ಲ. ಈ ಸಮಯದಲ್ಲಿ ನೀವು ನನ್ನ ಮತ್ತು ನನ್ನ ಕುಟುಂಬದ ಗೌಪ್ಯತೆಯನ್ನು ಅರ್ಥಮಾಡಿಕೊಳ್ಳುತ್ತೀರಿ ಮತ್ತು ಗೌರವಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. ಆದರೆ ಡಿವೋರ್ಸ್ ಬಗ್ಗೆ ಶ್ರೀದೇವಿಯವರ ಮಾತು ಕೇಳಿದ್ರೆ ಅವರಿಗೆ ವಿಚ್ಛೇದನ ಪಡೆಯೋದು ಇಷ್ಟವಿಲ್ಲ ಎನ್ನುವಂತಿದೆ. ಆದರೆ ಅವರು ವಿಚ್ಛೇದನ ಬಗ್ಗೆ ಹೆಚ್ಚು ಮಾತಾಡಿಲ್ಲ. ಯುವರಾಜ್​ಕುಮಾರ್ ಬಬ್ಬರೇ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು, ಒಮ್ಮತದ ವಿಚ್ಛೇದನ ಅಲ್ಲ ಎಂದು ಹೇಳಲಾಗುತ್ತಿದೆ.

ಇನ್ನೂ ಇದೇ ವಿಚಾರವಾಗಿ ಮಾತನಾಡಿದ ಯುವರಾಜ್​​ ಕುಮಾರ್​​ ಮಾವ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಶ್ರೀದೇವಿ ಮತ್ತು ಯುವರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಡಾ ರಾಜ್‌ಕುಮಾರ್‌ ಅವರ ಮೊಮ್ಮಗ ಯುವರಾಜ್ ಕುಮಾರ್​​ ಡಿವೋರ್ಸ್‌ ಅರ್ಜಿ ಸಲ್ಲಿಸಿದ್ದು, ಕಳೆದ 6 ತಿಂಗಳಿನಿಂದ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ.

ನನ್ನ ಮಗಳಿಕೆ ಕಿರುಕುಳ ಆಗಿದ್ದರೂ ಆಕೆ ನಾನು ನೊಂದುಕೊಳ್ಳುತ್ತೇನೆ ಅಂತ ಹೇಳಿಲ್ಲ ಎಂದು ಶ್ರೀದೇವಿ ತಂದೆ ಹೇಳಿದ್ದಾರೆ. ನಾವು ಕಾನೂನು ಸಮರ ಎದುರಿಸುತ್ತೇವೆ, ನನ್ನ ಮಗಳು ಸಾಕಷ್ಟು‌ ಹಿಂಸೆ ಅನುಭವಿಸಿದ್ದಾಳೆ.ನಾನು ಶಿವರಾಜ ಕುಮಾರ್ ಬಳಿ ಮಾತನಾಡಬೇಕು ಅಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲೇ ಇಲ್ಲ. ಕಳೆದ ಡಿಸೆಂಬರ್ ತಿಂಗಳಲ್ಲಿ ನನಗೆ ನೋಟಿಸ್ ಕಳಿಸಿದ್ರು. ಬಳಿಕ ಯುವ ಬಂದು ಮಾತನಾಡಿದ್ರು. ನನ್ನ ಮಗಳು ವಿದೇಶದಿಂದ ಬರಬೇಕು. ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಬೈರಪ್ಪ ತಿಳಿಸಿದ್ದಾರೆ.

ಮದುವೆಯಾಗಿ ಐದು ವರ್ಷಗಳಾಗಿವೆ. ಒಂದು ವರ್ಷದ ಹಿಂದೆ ಅಮೆರಿಕಾಗೆ ಹೋಗಿದ್ದರು. ಯುವ ಅವರೇ ಹೆಚ್ಚಿನ ವ್ಯಾಸಂಗಕ್ಕೆ ವಿದೇಶಕ್ಕೆ ಕಳುಹಿಸಿದ್ದರು.  ಮದುವೆ ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ವರ್ಷದ ಹಿಂದೆ ಬಂದ ಬಳಿಕವೂ ಆಕೆ ರಾಘಣ್ಣನ ಮನೆಗೆ ಹೋಗಿದ್ದಳು. ಯುವನ ಜೊತೆ ಮದುವೆ ಮಾಡಿದ್ದೇ ನಾವು . ನಮಗೆ ಅವರಿಬ್ಬರು ಚೆನ್ನಾಗಿರಬೇಕು ಅಂತ ಆಸೆ ಇದೆ. ನಾವು ಯಾವುದೇ ಕಾರಣಕ್ಕೂ ಡಿವೋರ್ಸ್ ಕೊಡಲ್ಲ ಎಂದು ಶ್ರೀದೇವಿ ತಂದೆ ಭೈರಪ್ಪ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ವಿಚ್ಛೇದನದ ಅರ್ಜಿಯು ಇನ್ನೂ ನನಗೆ ತಲುಪಿಲ್ಲ : ಡಿವೋರ್ಸ್ ವಿಚಾರಕ್ಕೆ ಬಿಟಿವಿಗೆ ಫಸ್ಟ್ ರಿಯಾಕ್ಷನ್ ಕೊಟ್ಟ ಯುವರಾಜ್​​ಕುಮಾರ್ ಪತ್ನಿ ಶ್ರೀದೇವಿ..!

Leave a Comment

DG Ad

RELATED LATEST NEWS

Top Headlines

ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ವಿಧಿವಶ..!

ನವದೆಹಲಿ : ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ. 92 ವರ್ಷದ ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಯ್ಲಲಿ ಇಂದು ಕೊನೆಯುಸಿರೆಳೆದಿದ್ದಾರೆ. ರಾತ್ರಿ 8

Live Cricket

Add Your Heading Text Here