Download Our App

Follow us

Home » ರಾಜಕೀಯ » ಸೋಮಣ್ಣ ಮನೆಗೆ ಬರಬಾರದು ನಾನು ಪ್ರಚಾರಕ್ಕೆ ಹೋಗಲ್ಲ – ಮಾಧುಸ್ವಾಮಿ ಗುಡುಗು

ಸೋಮಣ್ಣ ಮನೆಗೆ ಬರಬಾರದು ನಾನು ಪ್ರಚಾರಕ್ಕೆ ಹೋಗಲ್ಲ – ಮಾಧುಸ್ವಾಮಿ ಗುಡುಗು

ತುಮಕೂರು : ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಕರ್ನಾಟಕದ ಬಹುತೇಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ ತುಮಕೂರು ಲೋಕಸಭಾ ಕ್ಷೇತ್ರದಿಂದ ವಿ.ಸೋಮಣ್ಣಗೆ ಟಿಕೆಟ್‌ ನೀಡಲಾಗಿದೆ. ಹೈ ಕಮಾಂಡ್‌ನ ಈ ನಿರ್ಧಾರದಿಂದ ಕ್ಷೇತ್ರದಲ್ಲಿ ಅಸಮಾಧಾನ ಆರಂಭವಾಗಿದ್ದು, ವಿ.ಸೋಮಣ್ಣ ಪರ ಪ್ರಚಾರಕ್ಕೆ ಯಾವುದೇ ಕಾರಣಕ್ಕೂ ಹೋಗಲ್ಲ ಎಂದು ತುಮಕೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಅವರು, ತುಮಕೂರು ಲೋಕಸಭಾ ಕ್ಷೇತ್ರದಿಂದ ಸೋಮಣ್ಣಗೆ ಟಿಕೆಟ್ ಕೊಟ್ಟರೆ ಅವರ ಪರವಾಗಿ ಪ್ರಚಾರ ಮಾಡಲ್ಲ ಎಂದು ನಿರ್ಧರಿಸಿದ್ದೆ. ಸೋಮಣ್ಣ ಅಂತಲ್ಲ, ಹೊರಗಿನವರಿಗೆ ಯಾರಿಗೂ ಕೊಟ್ಟರೂ ನಾನು ಮಾಡಲು ಸಿದ್ಧನಿಲ್ಲ. ಹೀಗಾಗಿ ಸೋಮಣ್ಣ ಪರವಾಗಿ ನಾವು ಪ್ರಚಾರ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಯಾರಿಗೂ ಕೊಟ್ಟಿದ್ದರೂ ನಾನು ಅವರ ಪರವಾಗಿ ಪ್ರಚಾರ ಮಾಡುತ್ತಿದ್ದೆ. ನಮ್ಮ ಕಾರ್ಯಕರ್ತರು ತಟಸ್ಥವಾಗಿ ಇರೋಣ ಎಂದು ಹೇಳಿದರೆ ತಟಸ್ಥವಾಗಿ ಇರುತ್ತೇನೆ. ನಮಗೆ ಅನ್ಯಾಯ ಮಾಡಿದವರಿಗೆ ತಕ್ಕ ಉತ್ತರ ಕೊಡಬೇಕು ಅಂದರೆ ಕೊಡುತ್ತೇವೆ. ಬೇರೆ ಕಡೆ ಹೋಗುವ ಬಗ್ಗೆ ಯೋಚನೆ ಮಾಡಿದ್ದು ನಿಜ. ಮುಂದಿನ ನಿರ್ಧಾರವನ್ನು ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಸೋಮಣ್ಣ ಅವಕಾಶವಾದಿ ಅವರು ಅವಕಾಶ ಕೇಳಿದ್ದಾರೆ‌. ಅವರ ಮೇಲೆ ನಮಗೇನು ಬೇಸರ ಇಲ್ಲ‌. ನಂಬಿಸಿ ಕೈಬಿಟ್ಟ ಯಡಿಯೂರಪ್ಪನ ಮೇಲೆ ನಮಗೆ ಬೇಸರ. ನಾನು ಸೋಮಣ್ಣನನ್ನು ಮನೆಗೆ ಬರಬೇಡಿ ಅಂತ ಹೇಳುವಷ್ಟು ಕೆಟ್ಟ ಮನುಷ್ಯ ಅಲ್ಲ. ನಾನು ಸೆಟಲ್ ಆಗಿಲ್ಲ, ನನ್ನ ಮನಸ್ಥಿತಿ ಸರಿಯಾಗಿಲ್ಲ. ಈ ಟೈಮ್‌ನಲ್ಲಿ ಬರೋದು ಬೇಡ, ನಾಲ್ಕೈದು ದಿನ ಟೈಮ್ ಕೊಡು ಅಂತ ಹೇಳಿದ್ದೀನಿ. ಈಗ ನೀನು ನಮ್ಮ ಮನೆಗೆ ಬರೋದು ಸೀಟ್ಟಲ್ಲಿ ಏನಾದ್ರು ನಾನು ಅನ್ನೋದು‌, ಅದು ಬೇರೆ ರೀತಿಯಾಗಿ ಪ್ರಚಾರ ಆಗೋದು ಬೇಡ. ನಾನು ಯಾವುದೇ ಮಾತುಕತೆಗೆ ರೆಡಿ ಇಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.

ಯಡಿಯೂರಪ್ಪ ಅವರಿಗೆ ಬೇಕಾದ ಎರಡು ಮೂರು ಕ್ಷೇತ್ರದಲ್ಲಿ ಹಠ ಮಾಡಿ ತೆಗೆದುಕೊಂಡಿದ್ದಾರೆ. ನಮಗೆ ಯಾಕೆ ಹಠ ಮಾಡಿ ಸೀಟ್ ಕೊಡಿಸಲಿಲ್ಲ ಅನ್ನೋದೇ ನಮ್ಮ ಅಸಮಾಧಾನ. ಸೋಮಣ್ಣ ರಾಜ್ಯಸಭೆ ಟಿಕೆಟ್‌ಗಾಗಿ ಡೆಲ್ಲಿ ತನಕ ಹೋಗಿ ಓಡಾಡಿಕೊಂಡು ಬಂದರು. ನಮದ್ದೇನು ಅಭ್ಯಂತರ ಇರಲಿಲ್ಲ. ರಾಜ್ಯಸಭೆ ಟಿಕೆಟ್ ಕೈತಪ್ಪಿದೆ ಅಂದ್ರೆ ಎಲ್ಲಿ ಬೇಕಾದ್ರು ಟಿಕೆಟ್ ಕೊಡಬಹುದಾ..? ಅವರೇನು ಈ ಕ್ಷೇತ್ರದ ಸಂಬಂಧಿಕರಾ, ನೆಂಟ್ರಾ.? ನಾಳೆ ಏನಾದ್ರು ಗುಜರಾತ್‌ನಿಂದ ಕರೆದುಕೊಂಡು ತಂದು ನಿಲ್ಲಿಸಿದ್ರೆ ವೋಟ್ ಹಾಕೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

ಸೋಮಣ್ಣ ಸೋತಿದ್ದಾರೆ ಅಂದ್ರೆ ನಾನು ಸೋತಿಲ್ವಾ..? ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡು ಅಂತ ಸೋಮಣ್ಣಗೆ ಹೇಳಿದವರು ಯಾರು..? ಗೋವಿಂದರಾಜ ನಗರದಲ್ಲಿ ನನಗೆ ಗೆಲ್ಲೋಕೆ ಆಗಲ್ಲ. ಚಾಮರಾಜನಗರ ಉಸ್ತುವಾರಿ ಬೇಕು ಅಂತ ಹಠ ಮಾಡಿ ತಗೊಂಡು ಹೋಗಿ ಜಾಗ ಮಾಡಿಕೊಂಡ. ಯಾರೋ ಹುಡುಗನಿಗೆ ಕೊಟ್ಟಿದ್ರೆ ನಿಲ್ಲೋನು, ಗೆಲ್ಲೋನು. ನಮಗಿಂತ ಜಿಲ್ಲೆಯಲ್ಲಿ ಒಳ್ಳೆಯವರಿದ್ರೆ ಅವರಿಗೆ ಕೊಡಿ‌ ಸೋಮಣ್ಣಗೆ ಯಾಕೆ ಕೊಡ್ತೀರಾ..? ತುಮಕೂರು ಇತಿಹಾಸದಲ್ಲಿ ಹೊರಗಡೆ ಅವರು ಗೆದ್ದಿಲ್ಲ ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ : ಲೋಕಸಭಾ ಕುರುಕ್ಷೇತ್ರದ ಕದನಕ್ಕೆ ಇಂದು ​ಮುಹೂರ್ತ ಫಿಕ್ಸ್​ – ಚುನಾವಣಾ ಆಯೋಗದಿಂದ ಮಧ್ಯಾಹ್ನ 3 ಗಂಟೆಗೆ ಮಹತ್ವದ ಸುದ್ದಿಗೋಷ್ಟಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here