ಮೈಸೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಲು ಸ್ನೇಹಮಯಿ ಕೃಷ್ಣ ಮೈಸೂರು ಲೋಕಾಯುಕ್ತ ಎಸ್.ಪಿ. ಕಚೇರಿಗೆ ಧಾವಿಸಿದ್ದು, ಎಸ್.ಪಿ. ಟಿ.ಜೆ. ಉದೇಶ್ ಅವರಿಗಾಗಿ ಸುಮಾರು ಎರಡು ಗಂಟೆ ಕಾಲ ಕಾದಿದ್ದಾರೆ. ಸಿದ್ದರಾಮಯ್ಯ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನೀಡಿರುವ ಆದೇಶದ ಆನ್‌ಲೈನ್ ಪ್ರತಿಯೊಂದಿಗೆ ಮಧ್ಯಾಹ್ನ 12.30ರ ಸುಮಾರಿಗೆ ಅವರು ಲೋಕಾಯುಕ್ತ ಕಚೇರಿಗೆ ಧಾವಿಸಿದರು. ಆದರೆ ಆ ಸಂದರ್ಭ ಎಸ್.ಪಿ. ಉದೇಶ್ ಕಚೇರಿಯಲ್ಲಿ ಇರಲಿಲ್ಲ.
ಈ ಬಗ್ಗೆ ಮೈಸೂರಿನಲ್ಲಿ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿ, ಕೋರ್ಟ್ ಆರ್ಡರ್ ಆದ್ರೂ ಇನ್ನೂ FIR ಹಾಕಿಲ್ಲ, ಲೋಕಾಯುಕ್ತ SPಗೆ ಕಾಲ್ ಮಾಡಿದ್ರೆ ಕೈಗೆ ಸಿಗ್ತಿಲ್ಲ. SP ಕಿಡ್ನ್ಯಾಪ್ ಆಗಿದ್ದಾರಾ? ಗೃಹ ಬಂಧನದಲ್ಲಿದ್ದಾರಾ? SP ಸಿಗದಿದ್ರೆ ನಾಪತ್ತೆ ಕೇಸ್ ಹಾಕ್ತೀನಿ ಎಂದು ಸ್ನೇಹಮಯಿ ಕೃಷ್ಣ ಲೋಕಾಯುಕ್ತ SP ವಿರುದ್ಧ ಗುಡುಗಿದ್ದಾರೆ.
ಬೆಳಗ್ಗೆಯಿಂದ SP ಕಾಯುತ್ತಿದ್ರೂ ಇನ್ನೂ ಬಂದಿಲ್ಲ. ಕರೆ ಮಾಡಿದ್ರು ಸ್ವೀಕರಿಸುತ್ತಿಲ್ಲ, ಮೆಸೇಜ್ ಮಾಡಿದ್ರೆ ಸ್ಪಂದಿಸ್ತಿಲ್ಲ. SP ಬರದಿದ್ರೆ ಪೊಲೀಸರಿಗೆ ದೂರು ನೀಡುವುದು ಅನಿವಾರ್ಯ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಉಡುಪಿ : ಈಜುತ್ತಾ ಹೊಳೆ ದಾಟಿ ವಿದ್ಯುತ್ ದುರಸ್ತಿ ಮಾಡಿದ ಮೆಸ್ಕಾಂ ಸಿಬ್ಬಂದಿ – ಗ್ರಾಮಸ್ಥರಿಂದ ಮೆಚ್ಚುಗೆ..!