ಬ್ಯಾಂಕಾಕ್ : ಪ್ರಯಾಣಿಕರಿದ್ದ ಸಣ್ಣ ವಿಮಾನವೊಂದು ಥೈಲ್ಯಾಂಡ್‌ನಲ್ಲಿ ಪತನಗೊಂಡಿದ್ದು, ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬ್ಯಾಂಕಾಂಕ್ನಿಂದ ಟೇಕ್ ಆಫ್ ಆಗಿ ಸ್ವಲ್ಪ ಸಮಯದ ಬಳಿಕ ವಿಮಾನ ಪತನಗೊಂಡಿದೆ.
ವಿಮಾನ ನಿಲ್ದಾಣದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಮ್ಯಾಂಗ್ರೋವ್ ಜೌಗು ಪ್ರದೇಶದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದು, ವಿಮಾನದಲ್ಲಿದ್ದವರ ಗುರುತು ಇನ್ನು ಸ್ಪಷ್ಟವಾಗಿಲ್ಲ, 7 ಪ್ರಯಾಣಿಕರು, ಇಬ್ಬರು ಪೈಲಟ್ಗಳು ಇದ್ದರು ಎನ್ನಲಾಗಿದೆ.
ಥೈಲೆಂಡ್ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಥಾಯ್ ಫ್ಲೈಯಿಂಗ್ ಸರ್ವೀಸ್ ಕಂಪನಿಯಿಂದ ನಿರ್ವಹಿಸಲ್ಪಡುವ ಸೆಸ್ನಾ ಕಾರವಾನ್ ಗುರುವಾರ ಮಧ್ಯಾಹ್ನ 2.46ಕ್ಕೆ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಟೇಕ್ ಆಫ್ ಆದ 11 ನಿಮಿಷಗಳ ಬಳಿಕ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕವನ್ನು ಕಳೆದುಕೊಂಡಿದೆ. ಸದ್ಯ 300ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ಶೋಧ ಕಾರ್ಯದಲ್ಲಿ ನಿಯೋಜಿಸಲಾಗಿದ್ದು, ಅಪಘಾತದ ಕಾರಣವನ್ನು ಗುರುತಿಸಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಕಿರಣ್ ರಾಜ್ ನಟನೆಯ ಬಹುನಿರೀಕ್ಷಿತ ‘ರಾನಿ’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ!