Download Our App

Follow us

Home » ರಾಜಕೀಯ » ಹೆಚ್ಚುವರಿ ಡಿಸಿಎಂಗಳನ್ನು ಮಾಡೋದಾದ್ರೆ ಡಿಕೆಶಿಯನ್ನು ಸಿಎಂ ಮಾಡಿ : ಶಿವಗಂಗ ಬಸವರಾಜ್ ಸ್ಫೋಟಕ ಹೇಳಿಕೆ..!

ಹೆಚ್ಚುವರಿ ಡಿಸಿಎಂಗಳನ್ನು ಮಾಡೋದಾದ್ರೆ ಡಿಕೆಶಿಯನ್ನು ಸಿಎಂ ಮಾಡಿ : ಶಿವಗಂಗ ಬಸವರಾಜ್ ಸ್ಫೋಟಕ ಹೇಳಿಕೆ..!

ದಾವಣಗೆರೆ : ಕಾಂಗ್ರೆಸ್​ನಲ್ಲಿ ಮೂವರು ಡಿಸಿಎಂ ಹುದ್ದೆ ಸೃಷ್ಟಿಯ ಬಗ್ಗೆ ಭಾರೀ ಚರ್ಚೆಯಾಗ್ತಿದ್ದು, ಇದೀಗ ಈ ಸಂಬಂಧ ಕಾಂಗ್ರೆಸ್​ ಶಾಸಕ ಶಿವಗಂಗ ಬಸವರಾಜ್ ಬಿಗ್​ ಬಾಂಬ್​ ಸಿಡಿಸಿದ್ದಾರೆ. ಒಂದ್ವೇಳೆ ಹೆಚ್ಚುವರಿ ಡಿಸಿಎಂಗಳನ್ನು ಮಾಡೋದಾದ್ರೆ ಡಿಕೆಶಿ ಸಿಎಂ ಮಾಡಿ, ನಮ್ಮ ಡಿಕೆಶಿ ಅವರನ್ನು CM ಮಾಡಿ ಎಷ್ಟಾದ್ರೂ DCM ಮಾಡಿಕೊಳ್ಳಲಿ. ಡಿ.ಕೆ ಶಿವಕುಮಾರ್ ಅವರನ್ನ CM ಮಾಡಿ.. 5 ಜನರನ್ನ DCM ಮಾಡಲಿ ಎಂದು ಹೇಳಿದ್ದಾರೆ.

ಈ ಬಗ್ಗೆ ಚನ್ನಗಿರಿಯಲ್ಲಿ ಕಾಂಗ್ರೆಸ್​ ಶಾಸಕ ಶಿವಗಂಗಾ ಬಸವರಾಜ್​​ ಮಾತನಾಡಿ, ಡಿಕೆಶಿ ಸಿಎಂ ಮಾಡಿ, ಐವರನ್ನು ಡಿಸಿಎಂ ಮಾಡಿದ್ರೆ ನಮ್ಮ ಅಭ್ಯಂತರ ಇಲ್ಲ. ಡಿಸಿಎಂ ವಿಚಾರ ಚರ್ಚೆ ಬೇಡ ಅಂತಾ ಹಿರಿಯರು ಹೇಳಿದ್ದಾರೆ, ಅತ್ಯುತ್ತಮ ಸಂಘಟನೆ ಮಾಡ್ತಾರೆ ಅಂತಾ ಡಿಕೆಶಿ ಅವರನ್ನು ಡಿಸಿಎಂ ಮಾಡಿದ್ದಾರೆ. ಯಾವುದೇ ಜಾತಿ ಆಧಾರದ ಮೇಲೆ ಡಿಸಿಎಂ ಮಾಡಿಲ್ಲ ಎಂದಿದ್ದಾರೆ.

ಎಲ್ಲಾ ಸಮುದಾಯದವ್ರೂ ನಮಗೆ ವೋಟ್​ ಮಾಡಿದ್ದಾರೆ, ಸಮುದಾಯಕ್ಕೊಬ್ಬ ಡಿಸಿಎಂ ಮಾಡಲಿ ತಪ್ಪೇನು..? ಚುನಾವಣೆ ಮುಗಿದಾಯ್ತು, ಈಗ ಡಿಸಿಎಂ ಮಾಡಲು ಅವಕಾಶ ಇಲ್ಲ ಎಂದು ಶಿವಗಂಗ ಬಸವರಾಜ್ ಹೇಳಿದ್ದಾರೆ.

ಇದನ್ನೂ ಓದಿ : ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಪಾರ್ವತಿ ಜಗನ್ಮಾತೆಯಾದ ಕಥೆ “ಶ್ರೀ ದೇವೀ ಮಹಾತ್ಮೆ”..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here