ಖ್ಯಾತ ಗಾಯಕ ಅರ್ಮಾನ್ ಮಲಿಕ್ ಅವರು ಆಶ್ನಾ ಶ್ರಾಫ್ ಅವರೊಂದಿಗೆ ಹಸೆಮಣೆ ಏರಿದ್ದಾರೆ. ತಮ್ಮ ಅದ್ಭುತ ಕಂಠಸಿರಿಯ ಮೂಲಕ ಜನಮನ ಗೆದ್ದಿರುವ ಪ್ರಸಿದ್ಧ ಗಾಯಕ ತಮ್ಮ ಬಹುಕಾಲದ ಗೆಳತಿಯ ಕೈ ಹಿಡಿದಿದ್ದಾರೆ.
6 ವರ್ಷಗಳ ಡೇಟಿಂಗ್ ನಂತರ 2023ರ ಆಗಸ್ಟ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರೇಮಪಕ್ಷಿಗಳು ಇದೀಗ ದಾಂಪತ್ಯ ಜೀವನ ಆರಂಭಿಸಿದ್ದು, ಅತಿಸುಂದರ ಎನ್ನುವಂತಹ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಅರ್ಮಾನ್-ಆಶ್ನಾ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು, ಆಪ್ತ ಸ್ನೇಹಿತರು ಸಾಕ್ಷಿಯಾಗಿದ್ದರು. ಸಾಂಪ್ರದಾಯಿಕ ಆಚರಣೆಗಳೊಂದಿಗೆ ಮಾರ್ಡನ್ ಎಲಿಮೆಂಟ್ಸ್ ಈ ಈವೆಂಟ್ನಲ್ಲಿತ್ತು. ಸೂರ್ಯನ ಕಿರಣಗಳ ಕೆಳಗೆ ಹಾರ ಬದಲಾಯಿಸಿಕೊಂಡಿದ್ದು, ಫೋಟೋಗಳು ಅದ್ಭುತವಾಗಿ ಮೂಡಿಬಂದಿವೆ.
ಪುಷ್ಪಾಲಂಕಾರದಿಂದ ಸುತ್ತುವರೆದಿರುವ ಹೊರಾಂಗಣದಲ್ಲಿ ಮದುವೆ ನಡೆದಿದೆ. ವರ ಸಾಫ್ಟ್ ಪಿಂಕ್ ಶೇರ್ವಾನಿ ಧರಿಸಿದ್ರೆ, ವಧು ಪಿಂಕ್ ದುಪಟ್ಟಾದೊಂದಿಗೆ ಸೊಗಸಾದ ಆರೆಂಜ್ ಕಲರ್ ಲೆಹೆಂಗಾ ಧರಿಸಿ ಬೆರಗುಗೊಳಿಸಿಸುವ ನೋಟ ಬೀರಿದ್ದಾರೆ. ಇಬ್ಬರೂ ತಮ್ಮ ವಿಶೇಷ ದಿನದ ನೋಟವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸರಣಿ ಫೋಟೋಗಳನ್ನು ಹಂಚಿಕೊಂಡ ಜನಪ್ರಿಯ ಗಾಯಕ “ತು ಹಿ ಮೇರಾ ಘರ್” (ನೀನೇ ನನ್ನ ಮನೆ) ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಮನು ಭಾಕರ್, ಗುಕೇಶ್ ಸೇರಿ ನಾಲ್ವರಿಗೆ ಪ್ರತಿಷ್ಠಿತ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ..!