ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಖುಷಿಗಾಗಿ ಸಿಕಂದರ್ ಚಿತ್ರತಂಡ ಇಂದು ಸಿನಿಮಾದ ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿತ್ತು. ಆದ್ರೆ ಇಂದು ಬಿಡಗಡೆಯಾಗಬೇಕಿದ್ದ ಸಿಕಂದರ್ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಸಿಕಂದರ್ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲ್ಪಟ್ಟಿದೆ. ಎ.ಆರ್. ಮುರುಗದಾಸ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರದ ಟೀಸರ್ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ನಾಡಿಯಾವಾಲಾ ಗ್ರ್ಯಾಂಡ್ಸನ್ ಎಂಟೆಟೈನ್ಮೆಂಟ್ಸ್ನ ಅಫಿಷಿಯಲ್ ಎಕ್ಸ್ ಖಾತೆಯಲ್ಲಿ ಹೇಳಲಾಗಿದೆ. ಡಿಸೆಂಬರ್ 27ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾದ ಟೀಸರ್ ಡಿಸೆಂಬರ್ 28 ಬೆಳಗ್ಗೆ 11.07ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಿದೆ.
ಸಿಕಂದರ್ ಚಿತ್ರದ ಫಸ್ಟ್ ಲುಕ್ ಅನ್ನು ಸಲ್ಮಾನ್ ಅವರೇ ಕಳೆದ ಸಂಜೆ ಅನಾವರಣಗೊಳಿಸಿದ್ದರು. ಇಂದು ಟೀಸರ್ ಬಿಡುಗಡೆಯಾಗಬೇಕಿತ್ತು. ಆದ್ರೀಗ ಬಿಡುಗಡೆ ವಿಳಂಬವಾಗಿದ್ದು, ಅಭಿಮಾನಿಗಳು ನಾಳೆವರೆಗೂ ಕಾಯಬೇಕಿದೆ. ಪೋಸ್ಟರ್ ನಟನನ್ನು ಹೊಸ ಅವತಾರದಲ್ಲಿ ಪ್ರದರ್ಶಿಸಿದೆ.
ಇದನ್ನೂ ಓದಿ : ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈಜೋಡಿಸಿದ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ – ಗಣಿ ಹೊಸ ಸಿನಿಮಾ ಅನೌನ್ಸ್..!