ಗ್ಲೋಬಲ್ ಸ್ಟಾರ್ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಚಿತ್ರರಂಗಕ್ಕೆ ಪರಿಚಿತರಾಗಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದರು. ಅವರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಉತ್ತಮ ಜನಪ್ರಿಯತೆಯನ್ನು ಗಳಿಸಿದರು. ಶ್ರುತಿ ಹಾಸನ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ನಿರಂತರವಾಗಿ ಗಮನ ಸೆಳೆದಿರುವ ನಟಿ. ಲವ್, ರಿಲೇಷನ್ಶಿಪ್, ರೊಮ್ಯಾನ್ಸ್ ವದಂತಿಗಳಿಂದ ನಟಿ ಯಾವಾಗಲೂ ಸುದ್ದಿಯಲ್ಲಿದ್ದರು.
ಲವ್ ವಿಚಾರದಲ್ಲಿ ಸುದ್ದಿಯಾಗುವ ಶ್ರುತಿ ಹಾಸನ್, ಮದುವೆ ಬಗ್ಗೆ ಕೇಳಿದಾಗ ಉತ್ತರಿಸದೆ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಈಗ ಒಂದು ಸಂದರ್ಶನದಲ್ಲಿ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿದ್ದಾರೆ.
ನನಗೆ ಯಾರ ಜೊತೆಗಾದ್ರೂ ರಿಲೇಷನ್‌ಶಿಪ್‌ನಲ್ಲಿ ಇರೋದು ಇಷ್ಟ. ಲವ್ ಮಾಡೋದು ಇಷ್ಟ. ಆದ್ರೆ ಇಲ್ಲಿಯವರೆಗೆ ನನಗೆ ತುಂಬಾ ಸ್ಪೆಷಲ್ ಅನ್ನಿಸೋ ವ್ಯಕ್ತಿ ಯಾರೂ ಸಿಕ್ಕಿಲ್ಲ. ಮದುವೆ ಬಗ್ಗೆ ನಾನು ಯೋಚನೆ ಮಾಡಿಲ್ಲ. ಅದರ ಬಗ್ಗೆ ಆಸಕ್ತಿಯೂ ಇಲ್ಲ ಅಂತ ಹೇಳಿದ್ದಾರೆ. ಈಗ ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಅಂದ್ರೂ, ಮುಂದೆ ಏನಾಗುತ್ತೋ ಗೊತ್ತಿಲ್ಲ ಅಂತಲೂ ಹೇಳಿದ್ದಾರೆ. ಹಾಗಾಗಿ ಮದುವೆ ಆಗೋ ಸಾಧ್ಯತೆ ಇದೆ ಅಂತ ಅರ್ಥ.
ಶ್ರುತಿ ಹಾಸನ್ ತಮ್ಮ ಸಂಬಂಧವನ್ನು ಮರೆಮಾಚುವ ಪ್ರಯತ್ನ ಮಾಡದೇ, ಶಂತನು ಹಜಾರಿಕಾ ಜೊತೆಗಿನ ಪ್ರತಿ ಕ್ಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ಶಂತನು ಹಜಾರಿಕಾ ಶ್ರುತಿ ಹಾಸನ್ ಜೊತೆಯೂ ಬ್ರೇಕಪ್ ಮಾಡಿಕೊಂಡರು. ಇವರಲ್ಲದೆ ಸಿದ್ಧಾರ್ಥ್, ಧನುಷ್, ನಾಗ ಚೈತನ್ಯ ಹಾಗೂ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಅವರಂತಹ ಹೀರೋಗಳೊಂದಿಗೆ ಶ್ರುತಿ ಹಾಸನ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಶೃತಿ ಹಾಸನ್ ಸದ್ಯ ಸಿಂಗಲ್ ಆಗಿದ್ದೇನೆ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದ “ಅನ್ ಲಾಕ್ ರಾಘವ” ಚಿತ್ರತಂಡ..!