ಬೆಂಗಳೂರು : ಬೆಂಗಳೂರು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಈಗಾಗಲೇ ಹಲವು ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಗರ ನಿವಾಸಿಗಳು ಬೇಸತ್ತು ಹೋಗಿದ್ದಾರೆ. ಇದೀಗ ಪಿಜಿ ಅಸೋಸಿಯೇಷನ್ ಪಿಜಿಗಳ ದರ ಏರಿಕೆಗೆ ಮುಂದಾಗಿರುವುದರಿಂದ ಬೆಂಗಳೂರಿಗರಿಗೆ ಬಿಗ್ ಶಾಕ್ ಎದುರಾದಂತಾಗಿದೆ.
ಹೌದು.. ಕೊರೊನಾ ಕಾಲದಲ್ಲೂ ಬಾಡಿಗೆ ದರ ಏರಿಕೆ ಮಾಡದ ಪಿಜಿ ಅಸೋಸಿಯೇಷನ್ ಇದೀಗ ಅತ್ಯಂತ ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಪಿಜಿಗಳ ಬಾಡಿಗೆ ದರ ಹೆಚ್ಚಿಸುವುದಕ್ಕೆ ಮುಂದಾಗಿರುವ ಪಿಜಿ ಅಸೋಸಿಯೇಷನ್ ಶೀಘ್ರದಲ್ಲೇ ಪಿಜಿ ಮಾಲೀಕರ ಜೊತೆ ಸಭೆ ನಡೆಸಲು ಚಿಂತನೆ ನಡೆಸಿದೆ. ಈಗಾಗಲೇ ದಿನನಿತ್ಯದ ವಸ್ತುಗಳ ದರ ಏರಿಕೆಯ ಹಿನ್ನೆಲೆ ಪಿಜಿಗಳ ನಿರ್ವಹಣೆಗೆ ಕಷ್ಟ ಆಗುತ್ತಿದೆ ಎಂದು ಮಾಲೀಕರ ಅಳಲಾಗಿದೆ.
ಸದ್ಯ ನಗರದಲ್ಲಿ ಪ್ರದೇಶವಾರು ಬಾಡಿಗೆ ದರ ವ್ಯತ್ಯಾಸ ಇದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ದರ ಇದೆ. ಇದು ಮೂಲಸೌಕರ್ಯಗಳು, ಜನರಿಗೆ ಬೇಕಾದ ಸಾರಿಗೆ ಸಂಪರ್ಕದ ಮೇಲೆ ಅವಲಂಬನೆಯಾಗಿರುತ್ತದೆ. ಪಿಜಿ ಬಾಡಿಗೆ ವಿಚಾರಕ್ಕೆ ಬಂದರೆ ಒಂದೊಂದು ಪಿಜಿಯಲ್ಲಿ ಒಂದೊಂದು ದರ ಇದೆ. ಈ ಹೊತ್ತಲೇ ದರ ಏರಿಕೆ ಮಾಡಿದರೆ, ವಿದ್ಯಾರ್ಥಿಗಳು, ಉದ್ಯೂಗಿಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಇದೀಗ ಅನಿವಾರ್ಯ ಕಾರಣದಿಂದ ಈ ನಿರ್ಧಾರವನ್ನು ಪಿಜಿ ಅಸೋಸಿಯೇಷನ್ ತೆಗೆದುಕೊಂಡಿದೆ ಎನ್ನಲಾಗಿದೆ. ಅಧಿಕೃತವಾಗಿ ಎಷ್ಟು ದರ ಏರಿಕೆ ಅಂತಾ ಪಿಜಿ ಮಾಲೀಕರ ಜೊತೆ ಸಭೆ ನಡೆಸಿದ ಬಳಿಕ ಪ್ರಕಟಿಸಲಾಗುತ್ತದೆ. ಆದರೆ ಪಿಜಿ ಅಸೋಸಿಯೇಷನ್ ಈಗಾಗಲೇ ಶೇಕಡ 5ರಷ್ಟು ದರ ಏರಿಕೆ ಮಾಡಲು ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ರೋಮ್ಯಾನ್ಸ್ ಸೀನ್ ಶೂಟಿಂಗ್ ಮಾಡುವಾಗ ಕಂಟ್ರೋಲ್ ತಪ್ಪಿದ್ರಾ ವರುಣ್ ಧವನ್ ? – ನಟಿ ಜೊತೆಗಿನ ಹಾಟ್ ವಿಡಿಯೋ ಲೀಕ್!