ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪಿಯಾಗಿರುವ ನಟ ದರ್ಶನ್ 14 ದಿನ ನ್ಯಾಯಾಂಗ ಬಂಧನದಲ್ಲಿದ್ದು, ಸದ್ಯ ಪರಪ್ಪನ ಅಗ್ರಹಾರದಲ್ಲಿ 8 ದಿನಗಳನ್ನು ಈಗಾಗಲೇ ಕಳೆದಿದ್ದಾರೆ. ಇದೀಗ ದರ್ಶನ್ ಜೈಲಿಗೆ ಹೋಗಿದ್ದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಶಿವಣ್ಣ ಮಾತನಾಡಿ, ಹಣೆಬರಹ ಅದು ಏನೂ ಮಾಡೋಕಾಗಲ್ಲ, ನ್ಯಾಯ ಎಲ್ಲಿದೆಯೂ ಅದಾಗುತ್ತೆ. ನಾವ್ ಏನ್ ಮಾಡ್ತೀವಿ ಅದು ಸರಿನಾ ಅಂತ ಯೋಚನೆ ಮಾಡ್ಬೇಕು ಎಂದಿದ್ದಾರೆ.
ಈ ಘಟನೆಯಿಂದ ಆ ಫ್ಯಾಮಿಲಿಗೆ ಆಗ್ಲಿ, ದರ್ಶನ್ ಅವರ ಫ್ಯಾಮಿಲಿಗೆ ಆಗಲಿ ನೋವಾಗಿರುತ್ತೆ. ನ್ಯಾಯ ಏನಿದೆಯೋ ನೋಡೋಣ. ಈಗ ಮಾತಾಡಿ ಪ್ರಯೋಜನ ಇಲ್ಲ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಪಾನಿಪುರಿ ಬೆನ್ನಲ್ಲೇ ಶವರ್ಮಾದಲ್ಲೂ ಅಪಾಯಕಾರಿ ಬಾಕ್ಟೀರಿಯಾ ಪತ್ತೆ : ಬ್ಯಾನ್ಗೆ ಚಿಂತನೆ..!
Post Views: 499