ಕರುನಾಡ ಚಕ್ರವರ್ತಿ, ನಟ ಡಾ.ಶಿವರಾಜ್ ಕುಮಾರ್ ಅವರು ಅಮೆರಿಕದಲ್ಲಿ ಈಗಾಗಲೇ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ. ಆದರೆ ಅಮೆರಿಕದಲ್ಲಿ ಶಿವಣ್ಣ ಹೇಗಿದ್ದಾರೆ ಎನ್ನುವುದು ಅವರ ಅಭಿಮಾನಿಗಳನ್ನ ಕಾಡುತ್ತಿತ್ತು. ಸದ್ಯ ಈ ಸಂಬಂಧ ಅಮೆರಿಕದಿಂದ ಖುದ್ದು ಶಿವಣ್ಣ ಅವರೇ ತಮ್ಮ ಆರೋಗ್ಯ ಕುರಿತು ಬಿಗ್ ಅಪ್ಡೇಟ್ ನೀಡಿದ್ದಾರೆ. ಆಪರೇಷನ್ ನಂತ್ರ ಮೊದಲ ಬಾರಿಗೆ ವಿಡಿಯೋ ಮೂಲಕ ಮಾತ್ನಾಡಿದ ಅವರು, I WILL BE BACK, ಡಬ್ಬಲ್ ಪವರ್ ಜೊತೆ ಬರುತ್ತೇನೆ ಎಂದು ಖುಷಿ-ಖುಷಿಯಾಗಿ ಹೊಸ ವರ್ಷಕ್ಕೆ ಶುಭ ಸಂದೇಶ ಕಳಿಸಿದ್ದಾರೆ.
ಸರ್ಜರಿ ಕುರಿತು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣ ದಂಪತಿ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಮಾತನಾಡಿ, ಮೊದಲು ಎಲ್ಲ ಕನ್ನಡಿಗರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ನೀವೆಲ್ಲ ಮಾಡಿದ ಆಶೀರ್ವಾದದಿಂದ ಎಲ್ಲ ರಿಪೋರ್ಟ್ಗಳು ನೆಗೆಟಿವ್ ಬಂದಿವೆ. ಕೊನೆಯಲ್ಲಿ ಪೈಥೋಲಾಜಿ ರಿಪೋರ್ಟ್ ಬಗ್ಗೆ ಕಾಯುತ್ತಿದ್ದೇವು. ಅದು ಕೂಡ ನೆಗೆಟಿವ್ ಬಂದಿದ್ದು, ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಫ್ರಿ ಆಗಿದ್ದಾರೆ. ಈ ಬಗ್ಗೆ ಆಸ್ಪತ್ರೆಯವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇದಕ್ಕೆಲ್ಲ ಕಾರಣ ದೊಡ್ಡವರ ಹಾಗೂ ನಿಮ್ಮೆಲ್ಲರ ಆಶೀರ್ವಾದವಾಗಿದೆ. ನಾನು ಇದನ್ನು ನನ್ನ ಜೀವನದಲ್ಲಿ ಯಾವತ್ತೂ ಮರೆಯುವುದಿಲ್ಲ ಅಂತ ಗೀತಾ ಶಿವರಾಜ್ಕುಮಾರ್ ಅವರು ಹೇಳಿದ್ದಾರೆ. ಗೀತಕ್ಕ ಮಾತನಾಡುವಾಗ ಶಿವರಾಜ್ ಕುಮಾರ್ ಅವರು ಪಕ್ಕದಲ್ಲೇ ಕುಳಿತುಕೊಂಡಿದ್ದರು. ಅವರು ಕೂಡ ಮಾತನಾಡಿ ನಿಮ್ಮ ಆಶೀರ್ವಾದಿಂದ ಆರೋಗ್ಯವಾಗಿದ್ದೇನೆ ಎಂದಿದ್ದಾರೆ.
ಹೊಸ ವರ್ಷಕ್ಕೆ ಶುಭ ಹಾರೈಸಿದ ಶಿವಣ್ಣ, ನಾನು ಕೆಲವೊಮ್ಮೆ ಎಮೋಷನಲ್ ಆಗಿ ಬಿಡುತ್ತೇನೆ. ಹೀಗಾಗಿ ಮಾತು ಆರಂಭಿಸುವಾಗ ನನಗೆ ಭಯ ಆಗುತ್ತೆ. ಹೊರಡುವಾಗಲೂ ನಾನು ಸ್ವಲ್ಪ ಎಮೋಷನಲ್ ಆಗಿದ್ದೆ. ಭಯ ಅನ್ನೋದು ಮನುಷ್ಯನಿಗೆ ಇದ್ದೇ ಇರುತ್ತದೆ. ಭಯ ನೀಗಿಸುವ ಅಭಿಮಾನಿಗಳು, ಸಹಕಲಾವಿದರು ಇದ್ದಾರೆ. ಕೆಲವರು ಸ್ನೇಹಿತರು, ಸಂಬಂಧಿಕರು, ಡಾಕ್ಟರ್ಸ್ ಇರ್ತಾರೆ.
‘45’ ಸಿನಿಮಾದ ಇಡೀ ಶೂಟಿಂಗ್ ಕಿಮೋ ಥೆರಫಿಯಲ್ಲೇ ಶೂಟ್ ಆಗಿದೆ. ಗೀತಾ, ನಿವಿ ಯಾವಾಗಲೂ ನನ್ನ ಬೆಂಬಲವಾಗಿ ನಿಂತಿದ್ದಾರೆ. ಯೂರಿನರಿ ಬ್ಲಾಡರ್ ತೆಗೆದು ಹೊಸದು ಬ್ಲಾಡರ್ ಹಾಕಿದ್ದಾರೆ. ಯಾರೂ ಗಾಬರಿ, ಭಯ ಪಡಬೇಡಿ ಎಂದು ಶಿವಣ್ಣ ಧನ್ಯವಾದ ಹೇಳಿದ್ದಾರೆ. ನಿಧಾನವಾಗಿ ಓಡಾಡಿ ಅಂತಾ ವೈದ್ಯರು ಸಲಹೆ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಹೊಸ ವರ್ಷದ ಪ್ರಯುಕ್ತ ಮೈಸೂರಿನ ಯೋಗಾನರಸಿಂಹ ಸ್ವಾಮಿ ದೇಗುಲಕ್ಕೆ ಭಕ್ತರ ದಂಡು.. 2 ಲಕ್ಷ ಲಡ್ಡು ವಿತರಣೆ..!