Download Our App

Follow us

Home » ಜಿಲ್ಲೆ » ಬಗೆದಷ್ಟು ಬಯಲಾಗ್ತಿದೆ DySP ‘ಕಾಮ’ ಪುರಾಣ – ಪತಿ ಹೊರಗೆ ಕಳುಹಿಸಿ ಮಹಿಳೆಗೆ ಲೈಂಗಿಕ ದೌರ್ಜನ್ಯದ ಆರೋಪ!

ಬಗೆದಷ್ಟು ಬಯಲಾಗ್ತಿದೆ DySP ‘ಕಾಮ’ ಪುರಾಣ – ಪತಿ ಹೊರಗೆ ಕಳುಹಿಸಿ ಮಹಿಳೆಗೆ ಲೈಂಗಿಕ ದೌರ್ಜನ್ಯದ ಆರೋಪ!

ತುಮಕೂರು : DySP ರಾಮಚಂದ್ರಪ್ಪನ ‘ಕಾಮ’ಗಾರಿಯ ಪುರಾಣ ಬಗೆದಷ್ಟು ಬಯಲಾಗ್ತಿದೆ. ಈಗಾಗಲೇ ಪೊಲೀಸ್ ಕಚೇರಿಯ ಶೌಚಾಲಯದಲ್ಲೇ ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ 14 ದಿನ ನ್ಯಾಯಾಂಗ ಬಂಧನದಲ್ಲಿರುವ ರಾಮಚಂದ್ರಪ್ಪ ಸದ್ಯ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಇದೀಗ ಕಾಮುಕ ಮಾಸ್ಟರ್ ರಾಮಚಂದ್ರಪ್ಪ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿ ಬಂದಿದೆ.

DySP ರಾಮಚಂದ್ರಪ್ಪ
              DySP ರಾಮಚಂದ್ರಪ್ಪ

ಮಧುಗಿರಿಯಲ್ಲಿ ಹಲವಾರು ಮಹಿಳೆಯರನ್ನು ಟ್ರ್ಯಾಪ್ ಮಾಡಿರುವ ಆರೋಪ DySP ರಾಮಚಂದ್ರಪ್ಪ ಮೇಲಿದ್ದು ಬಿಟಿವಿಯಲ್ಲಿ ರಾಮಚಂದ್ರಪ್ಪನ ಮತ್ತೊಂದು ಮೆಗಾ ಎಕ್ಸ್​​ಕ್ಲೂಸಿವ್​ ಸ್ಟೋರಿ ಬಯಲಾಗಿದೆ. ರಾಮಚಂದ್ರಪ್ಪ ಅವರಿಂದ ದೌರ್ಜನ್ಯಕ್ಕೆ ಈಡಾಗಿರುವ ಮತ್ತೊಬ್ಬ ಸಂತ್ರಸ್ತೆ ಬಿಟಿವಿ ಮೂಲಕ ಅಳಲು ತೋಡಿಕೊಂಡಿದ್ದಾರೆ. ಸೈಟ್​ ಕೇಸ್​ ಸಂಬಂಧ ಮಾತನಾಡಲು ಮಧುಗಿರಿ ಡಿವೈಎಸ್​​ಪಿ ಕಚೇರಿಗೆ ಕರೆಸಿಕೊಂಡು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ವಿಡಿಯೋ ಮೂಲಕ ಕಣ್ಣೀರು ಹಾಕಿದ್ದಾರೆ. ರಾಮಚಂದ್ರಪ್ಪ ಯಾವ ರೀತಿ ಟ್ರ್ಯಾಪ್​ ಮಾಡಿದ ಎಂಬುದರ ಬಗ್ಗೆ ಡಿಟೇಲ್ಸ್​​ ನೀಡಿದ್ದಾರೆ.

 

ಸಂತ್ರಸ್ತೆ
ಸಂತ್ರಸ್ತೆ

ಸಂತ್ರಸ್ತೆ ಪತಿಯನ್ನ ಕಚೇರಿಯಿಂದ ಕಳುಹಿಸಿ ಇನ್ನಿಲ್ಲದಂತೆ ಟಾರ್ಚರ್​​​​ ಮಾಡಿದ್ದಾನಂತೆ. ಮಾಹಿತಿ ಪಡೆಯುವ ನೆಪದಲ್ಲಿ ತಮ್ಮ ಚೇಂಬರ್​​ಗೆ ಕರೆಸಿಕೊಂಡಿದ್ದ ಡಿವೈಎಸ್​ಪಿ ರಾಮಚಂದ್ರಪ್ಪ, ಏನಾಯ್ತು ಹೇಳಮ್ಮ ಎಂದು ಕೇಳಿದ್ದರಂತೆ. ನನಗೆ ನ್ಯಾಯ ಕೊಡಿಸಿ ಎಂದು ಕಾಲಿಗೆ ಬಿದ್ದಿದ್ದ ಸಂತ್ರಸ್ತ ಮಹಿಳೆಯನ್ನು ಮೇಲೆತ್ತುವ ನೆಪದಲ್ಲಿ ಮೈ-ಕೈ ಮುಟ್ಟಿ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಮುತ್ತು​ ಕೊಟ್ಟು ಲೈಂಗಿಕವಾಗಿ ಬಳಸಿಕೊಳ್ಳಲು ರಾಮಚಂದ್ರಪ್ಪ ಯತ್ನ ಮಾಡಿದ್ದರಂತೆ. ಇದೆಲ್ಲಾ ಬೇಡ..ಬೇಡ ಎಂದು ಕಣ್ಣೀರು ಹಾಕಿದರೂ ಕಾಮುಕ ರಾಮಚಂದ್ರಪ್ಪ ಬಿಡಲಿಲ್ಲವಂತೆ.

ಕಣ್ಣೀರು ಒರೆಸುವ ನೆಪದಲ್ಲಿ ಮಹಿಳೆಯನ್ನು ಮುದ್ದಾಡಿದ್ದಾರಂತೆ. ನೀವು ತಂದೆ ಸಮಾನ ಎಂದು ಬೇಡಿಕೊಂಡರೂ ಬಿಡಲಿಲ್ವಂತೆ ಕಾಮುಕ ರಾಮಚಂದ್ರಪ್ಪ. ಭಯ ಬಿದ್ದು ಓಡಿ ಹೋಗಲು ಯತ್ನಿಸಿದರೂ ಬಿಡದೆ ಲೈಂಗಿಕ ದೌರ್ಜನ್ಯ ಮಾಡಿರುವ ಗಂಭೀರ ಆರೋಪವನ್ನು ಮಹಿಳೆಯೊಬ್ಬರು ಮಾಡಿದ್ದಾರೆ. ಕೊನೆಗೆ ಕೇವಲ 500 ರೂಪಾಯಿ ಹಣ ನೀಡಿ ಯಾರಿಗೂ ಹೇಳದಂತೆ ವಾರ್ನಿಂಗ್​​​​​​​​​​​​​​​​ ಕೊಟ್ಟಿದ್ದಾನಂತೆ ಚಪಲ ಚೆನ್ನಿಗರಾಯ ಡಿವೈಎಸ್​ಪಿ ರಾಮಚಂದ್ರಪ್ಪ.

ಪೊಲೀಸ್​ ಕಚೇರಿಯಿಂದ ಅಳುತ್ತಲೇ ಹೊರಗೆ ಬಂದ ಸಂತ್ರಸ್ತೆ ಮಾರನೆಯ ದಿನ ತನ್ನ ಪತಿಗೆ ವಿಷಯ ತಿಳಿಸಿದ್ದಾರೆ. ಇದೀಗ ಸಂತ್ರಸ್ತೆ ವಿಡಿಯೋ ಮೂಲಕ ಡಿವೈಎಸ್​​ಪಿ ಕಚೇರಿಯಲ್ಲಿ ನಡೆದಿದ್ದ ಕೃತ್ಯದ ಡಿಟೇಲ್ಸ್​​​​ ಹೇಳಿದ್ದು ರಾಮಚಂದ್ರಪ್ಪನ ಕಾಮ ಪುರಾಣದ ಇಂಚಿಂಚೂ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ : BTV ಎಕ್ಸ್​ಕ್ಲೂಸಿವ್​ ರಿಪೋರ್ಟ್.. ‘ಚಪಲ’ DySP ರಾಮಚಂದ್ರಪ್ಪ ಕೊನೆಗೂ ಜೈಲು ಪಾಲು!

Leave a Comment

DG Ad

RELATED LATEST NEWS

Top Headlines

ಹೊಸ ವರ್ಷದ ಆರಂಭದಲ್ಲೇ ಬಿಗ್ ಶಾಕ್​​.. ಸ್ಟಾರ್ ನಟನಿಗೆ ಅನಾರೋಗ್ಯ – ಫ್ಯಾನ್ಸ್ ಆತಂಕ.. ಹೆಲ್ತ್​ ಬುಲೆಟಿನ್​​​ನಲ್ಲಿ ಏನಿದೆ ?

ಚೆನ್ನೈ : ತಮಿಳು ನಟ ವಿಶಾಲ್‌ ಅವರು ಗಂಭೀರವಾದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆಯೇ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ತಮಿಳು ಚಿತ್ರರಂಗದಲ್ಲಿ ವಿಶಾಲ್‌ ಫೇಮಸ್‌ ಆಗಿದ್ದಾರೆ. ಅಲ್ಲದೆ

Live Cricket

Add Your Heading Text Here