ಹೈದ್ರಾಬಾದ್ : ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಆಯೋಗದ ಸಮಿತಿ ವರದಿ ಬಂದ ನಂತರ ಭಾರೀ ಸಂಚಲನ ಸೃಷ್ಟಿಯಾದ ಬೆನ್ನಲ್ಲೇ ಟಾಲಿವುಡ್ನಲ್ಲೂ ಆಗಾಗ ಲೈಂಗಿಕ ದೌರ್ಜನ್ಯದ ಘಾಟು ಹೆಚ್ಚಾಗ್ತಿದೆ. ಇತ್ತೀಚೆಗೆ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯದಡಿ ದೂರು ದಾಖಲಾಗಿತ್ತು. ಇದೀಗ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ನಟಿ ಪೂನಂ ಕೌರ್ ಆಗ್ರಹಿಸಿದ್ದಾರೆ.
ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸನ್ ಮೇಲೆ ಲೈಂಗಿಕ ದೌರ್ಜನ್ಯದ ಬಾಂಬ್ ಸ್ಫೋಟಿಸಿರುವ ನಟಿ ಪೂನಂಕೌರ್ ಅವರು ತೆಲುಗು ಚಿತ್ರರಂಗಕ್ಕೆ ತ್ರಿವಿಕ್ರಮ್ ಶ್ರೀನಿವಾಸನ್ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ತ್ರಿವಿಕ್ರಮ್ ಅವರ ವಿರುದ್ಧ ನಾನು ಈ ಹಿಂದೆ ಚಿತ್ರರಂಗದ ಹಿರಿಯರಿಗೆ ದೂರು ನೀಡಿದ್ದೆ, ಆದರೆ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಬೇಸತ್ತು ನಾನೇ ಚಿತ್ರರಂಗದಿಂದ ಹಿಂದೆ ಸರಿದೆ. ಇನ್ನಾದರೂ ಚಿತ್ರರಂಗದ ಹಿರಿಯರು ನಾನು ಕೊಟ್ಟಿರುವ ದೂರನ್ನು ಗಂಭೀರವಾಗಿ ಪರಿಗಣಿಸಿ ತ್ರಿವಿಕ್ರಮ್ ಅವರನ್ನು ಪ್ರಶ್ನೆ ಮಾಡುವಂತಾಗಲಿ ಎಂದು ಹೇಳಿದ್ದಾರೆ.
ಟಾಲಿವುಡ್ ನಟಿ ಪೂನಂ ಕೌರ್ ಮತ್ತೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ಗರಂ ಆಗಿದ್ದಾರೆ. ನಿರ್ದೇಶಕ ತ್ರಿವಿಕ್ರಮ್ ಮೇಲೆ ದೂರು ನೀಡಿದ್ದರೂ MAA ಸಂಸ್ಥೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಟಿ ರಾಂಗ್ ಆಗಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ನಟಿ ಬರೆದುಕೊಂಡಿದ್ದಾರೆ.
ತೆಲುಗಿನ ಕಲಾವಿದರ ಸಂಘ ‘ಮಾ’ ಕುರಿತು ಎಕ್ಸ್‌ನಲ್ಲಿ ರಿಯಾಕ್ಟ್ ಮಾಡಿ, ತ್ರಿವಿಕ್ರಮ್ ಶ್ರೀನಿವಾಸ್ ಮೇಲಿನ ದೂರನ್ನು ‘ಮಾ’ ಸಂಸ್ಥೆ ಸ್ವೀಕರಿಸಲಿಲ್ಲ. ಯಾವುದೇ ವಿಚಾರಣೆ ಮಾಡಿಲ್ಲ. ಸೂಕ್ತ ಕ್ರಮ ಕೈಗೊಂಡಿಲ್ಲ. ಆತ ನನ್ನ ಜೀವನವನ್ನೇ ನಾಶ ಮಾಡಿ ಬಿಟ್ಟ ಎಂದು ಬರೆದುಕೊಂಡಿದ್ದಾರೆ. ಹಾಗಾದ್ರೆ ‘ಮಾ’ ಸಂಸ್ಥೆ ಯಾರ ಪರ ನಿಂತಿದೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ‘ಮಾ’ ಸಂಸ್ಥೆ ಸ್ಪಂದಿಸಿ, ಎಕ್ಸ್‌ನಲ್ಲಿ ಆರೋಪ ಮಾಡಿದ್ರೆ ಪ್ರಯೋಜನವಿಲ್ಲ. ತ್ರಿವಿಕ್ರಮ್ ವಿರುದ್ಧ ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ. ಇದುವರೆಗೂ ಯಾವುದೇ ಲಿಖಿತ ದೂರು ಬಂದಿಲ್ಲ ಎಂದು ‘ಮಾ’ ಚಲನಚಿತ್ರ ಕಲಾವಿದರ ಸಂಘ ಪೂನಂ ಆರೋಪಕ್ಕೆ ಉತ್ತರ ಕೊಟ್ಟಿದೆ.
ಇದನ್ನೂ ಓದಿ : ಕೂಲ್ ಡ್ರಿಂಕ್ಸ್ ಕುಡಿಯೋ ಮುನ್ನ ಅಲರ್ಟ್- D-Martನಲ್ಲಿ ಖರೀದಿಸಿದ್ದ FROOTI ಬಾಟಲ್ನಲ್ಲಿ ಫಂಗಸ್ ಪತ್ತೆ!